ಮೈಸೂರು

ಕೆಆರ್ ಆಸ್ಪತ್ರೆಯ ಕೊಠಡಿಯೊಳಗೆ ಸಿಬ್ಬಂದಿಗಳ ಬೈಕ್ –ಸ್ಕೂಟರ್ ಪ್ರವೇಶ ! ರೋಗಿಗಳ ಪೋಷಕರಿಗಿಲ್ಲ ಸ್ಥಳ…ಅವರಿಗೆ ರಸ್ತೆಯೇ ಗತಿ …ಇದೆಂಥಾ ಸ್ಥಿತಿ

ಮೈಸೂರು,ಮಾ.12:-   ಮೈಸೂರು ದೊಡ್ಡಾಸ್ಪತ್ರೆಯೆಂದು ಗುರುತಿಸಿಕೊಂಡಿರುವ ಸುತ್ತ ನಾಲ್ಕಾರು ಜಿಲ್ಲೆಗಳಿಂದ ಚಿಕಿತ್ಸೆಗೆಂದು ಆಗಮಿಸುವ ಕೆ ಆರ್ ಆಸ್ಪತ್ರೆ ಮತ್ತು ಚೆಲುವಾಂಬಾ ಆಸ್ಪತ್ರೆಯಲ್ಲಿ ರೋಗಿಗಳ, ರೋಗಿಗಳನ್ನು ಕರೆತಂದವರು  ಪಡಬಾರದು ಪಾಡು ಪಡುವಂತಾಗಿದೆ.

ಆಸ್ಪತ್ರೆಯ ಸಿಬ್ಬಂದಿಗಳು ಬೈಕ್ ಸ್ಕೂಟರ್ ಗಳನ್ನು ಆಸ್ಪತ್ರೆಯ ಕೊಠಡಿಯ ಒಳಗೆ ತಂದು ನಿಲ್ಲಿಸುತ್ತಿದ್ದು,  ಚಿಕಿತ್ಸೆಗೆಂದು ಬಂದ ರೋಗಿಗಳ ಪೋಷಕರು ಕುಳಿತುಕೊಳ್ಳಲು ಜಾಗವಿಲ್ಲದೇ, ಮಲಗಲು ಜಾಗವಿಲ್ಲದೇ  ರಸ್ತೆಯ ಮಧ್ಯದಲ್ಲಿ ಮಲಗುವಂತಾಗಿದೆ.  ರೋಗಿಗಳನ್ನು ಸಾಗಿಸಲು ಕೈ ಗಾಡಿಗಳಿಲ್ಲ.  ರೂಂನಿಂದ ರೂಮಿಗೆ ಅಥವಾ ಸಣ್ಣಪುಟ್ಟ ಪರೀಕ್ಷೆ ಮಾಡಿಸಿಕೊಳ್ಳಲು ಬರುವ  ರೋಗಿಗಳು ಕಷ್ಟಪಟ್ಟು ಸಾಗಬೇಕು.  ಕುಡಿಯಲು ಬ್ಯಾಟರಿ ಹಾಕಿ ಹುಡುಕಿದರೂ ಶುದ್ಧ ಕುಡಿಯುವ ನೀರಿಲ್ಲ.   ಹೆಸರಿಗೆ ಕೆ ಆರ್ ಆಸ್ಪತ್ರೆ, ದೊಡ್ಡ ಆಸ್ಪತ್ರೆ.  ಕೆ ಆರ್ ಆಸ್ಪತ್ರೆ ಜವಾಬ್ದಾರಿಯನ್ನು ಹೊತ್ತಿರುವ   ಹಿರಿಯ ವೈದ್ಯಾಧಿಕಾರಿಗಳು ಜ್ಞಾನ ವಿಲ್ಲದಂತೆ ವರ್ತಿಸುತ್ತಿದ್ದಾರೆ ಅವರಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಕುರಿತು ತಿಳಿದಿಲ್ಲ.  ಕೆಲವೆಡೆ ಫ್ಯಾನ್ ಇಲ್ಲದೇ ಸೆಕೆಗೆ ಬೆಂದು ಬಸವಳಿಯುತ್ತಿದ್ದಾರೆ ರೋಗಿಗಳು.  ಬಡರೋಗಿಗಳು ಹೇಗೋ ಖಾಯಿಲೆ ತೋರಿಸೋಣ ಎಂದು ಹಸಿರು ಕಾರ್ಡ್, ಆಧಾರ್ ಕಾರ್ಡ್ ತೆಗೆದು ಕೊಂಡು  ಆಸ್ಪತ್ರೆಗೆ ಬಂದರೆ  ವಿಜಯನಗರ ಐಶ್ವರ್ಯ ಆಸ್ಪತ್ರೆಗೆ ಬನ್ನಿ ಎಂದು ಕರೆದು ಕೊಂಡು ಬಂದು ಕೂತು   ಬಡರೈತರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಸಾಮಾಜಿಕ ಚಿಂತಕ ಹಂ.ಲಕ್ಕೇಗೌಡ. ಕೆಲವೈದ್ಯರದ್ದು ಬೇರೆಯೇ ಬೆಲೆ. ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಎಕ್ಸರೇ ತೆಗೆಸಲು ,ಯಾವುದೇ ರೋಗಿಯ ಪರೀಕ್ಷೆಗೆ  ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ.  ಆಸ್ಪತ್ರೆ ಅಶುಚಿತ್ವದಿಂದ ಕೂಡಿದ್ದು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕೆ.ಆರ್.ಆಸ್ಪತ್ರೆ ಅವ್ಯವಸ್ಥೆಯ ಆಗರವಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: