ಮೈಸೂರು

ಪೊಲೀಸ್ ಅಧಿಕಾರಿ ಪ್ರಕಾಶ್ ಅವರಿಗೆ ಬೀಳ್ಕೊಡುಗೆ

ಮೈಸೂರು,ಮಾ.12:-  ಮೂರು ವರ್ಷಗಳ ಕಾಲ ನಗರದ ಕೃಷ್ಣರಾಜ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ  ಸೇವೆ ಸಲ್ಲಿಸಿದ್ದ ಪ್ರಕಾಶ್ ಅವರು ವರ್ಗಾವಣೆಗೊಂಡಿದ್ದು, ಕನ್ನಡ ಹೋರಾಟಗಾರರು ಠಾಣೆಗೆ ಆಗಮಿಸಿ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಈಗಿನ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ನಾರಾಯಣ್, ಠಾಣಾ ಉಪ ಅಧಿಕಾರಿಗಳಾದ ಸುನಿಲ್, ಠಾಣಾ ಸಿಬ್ಬಂದಿ ಸಿದ್ದರಾಜು, ಹಿರಿಯ ಹೋರಾಟಗಾರರಾದ ಸತ್ಯಪ್ಪ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಕನ್ನಡ ಕ್ರಾಂತಿದಳದ ಯುವ ಘಟಕದ ಅಧ್ಯಕ್ಷ  ತೇಜಸ್ವಿ ಕುಮಾರ್ , ಯುವ ಹೋರಾಟಗಾರ  ರಾಮು ಹಾಗೂ ಠಾಣಾ ಸಿಬ್ಬಂದಿಗಳು ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: