ಸುದ್ದಿ ಸಂಕ್ಷಿಪ್ತ

ಹಾಸನ: ಮಾ.12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ (ಮಾ.11): 66 ಕೆ.ವಿ. ಹಳೇಬೀಡು ವಿ.ವಿ ಕೇಂದ್ರದಲ್ಲಿ 11 ಕೆ.ವಿ. ಓ.ಡಿ.ಎಸ್.ನ ಕೆಲಸಗಳನ್ನು ಹಮ್ಮಿಕೊಂಡಿರುವ ಪ್ರಯುಕ್ತ ಮಾ.12 ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆ.ವಿ. ಹಳೇಬೀಡು ವಿ.ವಿ. ಕೇಂದ್ರಗಳೀಂದ ವಿದ್ಯುತ್ ಪೂರೈಕೆಸುವ ಗ್ರಾಮ ಪಂಚಾಯಿತಿಗಳಾದ ಗೋನಿಸೋಮನಹಳ್ಳಿ ಘಟ್ಟದಹಳ್ಳಿ, ದ್ಯಾವಪ್ಪನಹಳ್ಳಿ, ಮತಿಘಟ್ಟ, ಕರಿಕಟ್ಟೆಹಳ್ಳಿ, ನಾಗರಾಜಪುರ, ಮಾಯಾಗೌಡನಹಳ್ಳಿ, ಪುಷ್ಪಗಿರಿ, ಸಿದ್ದಾಪುರ, ಹರುಬಿಹಳ್ಳಿ, ಕ್ಯಾತನಕೆರೆ, ತಟ್ಟೆಹಳ್ಳಿ, ರಾಜಗೆರೆ, ಸೊಪ್ಪಿನಹಳ್ಳಿ, ಮೊಹಮ್ಮದ್‍ಪುರ, ಹುಲಿಕೆರೆ, ಬಸದಿಹಳ್ಳಿ ಮತ್ತು ಹಳೇಬೀಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಟಿ.ಎಲ್. ಅಂಡ್ ಎಸ್.ಎಸ್. ವಿಭಾಗ, ಕವಿಪ್ರನಿನಿ ಕಾರ್ಯಪಾಲಕ ಇಂಜಿನಿಯರ್ (ವಿ) ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: