ಕರ್ನಾಟಕಮೈಸೂರು

1.5 ಲಕ್ಷ ರೂಪಾಯಿ ಜೀವನಾಂಶಕ್ಕೆ ಆಗ್ರಹಿಸಿ ಮಾಜಿ ಸಚಿವ ಕುಮಾರಸ್ವಾಮಿ ಪತ್ನಿ ಧಾವೆ

ಮಾಜಿ ಸಚಿವ ಕುಮಾರಸ್ವಾಮಿ ಪತ್ನಿ ಸವಿತಾ ಅವರು ವಿವಾಹ ವಿಚ್ಛೇಧನ ಹಾಗೂ ಜೀವನಾಂಶಕ್ಕಾಗಿ ಮೈಸೂರಿನ ಜೆಎಂಎಪ್ಸಿ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಹಾಗೂ ಪತಿ ಕುಮಾರಸ್ವಾಮಿಯವರು ಪತ್ನಿಯೊಂದಿಗೆ ಆತ್ಮೀಯತೆ ಇಲ್ಲ, ಇನ್ನೊಂದು ಹೆಣ್ಣಿನೊಂದಿಗೆ ಅನೈತಿಕ ಸಂಬಂಧವಿರುವುದಾಗಿ ಆರೋಪಿಸಿರುವ ಸವಿತಾ ಅವರು ಪತಿಯಿಂದ ಬಿಡುಗಡೆಬೇಕು ಹಾಗು ಜೀವನಾಂಶಕ್ಕಾಗಿ 2.50 ಕೋಟಿ ರೂಪಾಯಿ ಆಸ್ತಿ ಮತ್ತು ತಿಂಗಳಿಗೆ 1.50 ಲಕ್ಷ ರೂ ಜೀವನಾಂಶವನ್ನು ಸೇರಿದಂತೆ 5 ಲಕ್ಷ ರೂಪಾಯಿ ನ್ಯಾಯಾಲಯದ ವೆಚ್ಚವನ್ನು ಭರಿಸುವಂತೆ ಧಾವೆ ಹೂಡಿದ್ದಾರೆ. ಪ್ರಸ್ತುತ ಮೈಸೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗಾಗಲೇ ಪತಿ ಪತ್ನಿಯ ನಡುವಿನ ಗುಟ್ಟು ಬೀದಿ ರಟ್ಟಾಗಿತ್ತು, ದಾಂಪತ್ಯ ಕಲಹವೂ ಮಾಧ್ಯಮಗಳ ಮೂಲಕ ನೇರ ಪ್ರಸಾರದಲ್ಲಿ ಇಡೀ ರಾಜ್ಯದ ಜನರು ಕಂಡಿದ್ದನ್ನು ಸ್ಮರಿಸಬಹುದು.

 

Leave a Reply

comments

Related Articles

error: