ಪ್ರಮುಖ ಸುದ್ದಿಮೈಸೂರು

ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವಿಲ್ಲ : ಕಾರ್ಯಕರ್ತರ ಕಡೆಗಣನೆ

ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಬೇಕು

ಮೈಸೂರು, ಮಾ.12 : ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ ಒಬ್ಬರೇ ಶಾಸಕರನ್ನು ಹೊಂದಿದ್ದು, ಜೆಡಿಎಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಇಬ್ಬರು ಸಚಿವರು ಇರುವ ಕಾರಣ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಅಸ್ತಿತ್ವವೇ ಹೋಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಕ್ಕಿ ಕಣಕ್ಕಿಳಿಯುವ ಅವಕಾಶವನ್ನು ಕಾಂಗ್ರೆಸ್ ತಾನೇ ಉಳಿಸಿಕೊಳ್ಳಬೇಕೆಂದು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸೇವಾದಳ ಯುವ ಬ್ರಿಗೇಡ್ ಆಗ್ರಹಿಸಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮಜೀದ್ ಇನಾಯತ್ ಖಾನ್, ಕಾಂಗ್ರೆಸ್‌ನಿಂದ ಯಾರನ್ನೇ ಕಣಕ್ಕಿಳಿಸಿದರೂ ತಾವೆಲ್ಲ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರಲ್ಲದೆ, ಒಂದು ವೇಳೆ ಮೈತ್ರಿ ಕಾರಣದಿಂದ ಜೆಡಿಎಸ್ ಅಭ್ಯರ್ಥಿ ಹಾಕಿದಲ್ಲಿ ತಾವು ಯಾರೂ ಸಹಕರಿಸುವುದಿಲ್ಲ ಎಂದು ಎಚ್ಚರಿಸಿದರು.

ಅಲ್ಲದೆ, ತಾವು ಕಾಂಗ್ರೆಸ್‌ನಿಂದ ಇಂತಹವರನ್ನೇ ಅಭ್ಯರ್ಥಿಯನ್ನಾಗಿಸಿ ಎಂದು ಹಠ ಹಿಡಿಯುವುದಿಲ್ಲ, ಬದಲಾಗಿ ಸಿ.ಎಚ್. ವಿಜಯಶಂಕರ್ ಆಗಿರಲಿ, ಇಲ್ಲವೇ ಸೂರಜ್ ಹೆಗಡೆ ಕಣಕ್ಕೆ ಇಳಿದರೂ ತಾವು ಗೆಲುವಿಗೆ ಶ್ರಮಿಸುವುದಾಗಿ ಸ್ಪಷ್ಟ ಪಡಿಸಿದರು.

ಸೈಯದ್ ಶೋಯಬ್, ಸೈಯದ್ ಅತೀರ್, ಕುರುಬಾರಹಳ್ಳಿ ಹೇಮಂತ್, ರಾಜೇಶ್, ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: