ಪ್ರಮುಖ ಸುದ್ದಿ

64 ವರ್ಷದ ಮಹಿಳೆಗೆ ಕೆಲಸಕೊಡಿಸುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ವ್ಯಕ್ತಿಗಳ ಬಂಧನ

ರಾಜ್ಯ(ಬೆಂಗಳೂರು)ಮಾ.12:-  64 ವರ್ಷದ ಮಹಿಳೆಗೆ ಕೆಲಸಕೊಡಿಸುವುದಾಗಿ ನಂಬಿಸಿ, ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ತಲಘಟ್ಟ ಠಾಣೆ ಪೊಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಯಲಹಂಕದ ಪ್ರೇಮ್ ಹಾಗೂ ಬಿಮಲ್ ಎಂದು ಗುರುತಿಸಲಾಗಿದೆ.  64 ವರ್ಷದ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಿಳೆ ಕಾರ್ಮಿಕರಾಗಿ ಕೆಲಸಮಾಡುತ್ತಿದ್ದರು. ಹೆಚ್ಚು ಸಂಬಳ ಬರುವ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ, ಮಹಿಳೆ ಪರಿಚಯಸ್ಥನಾದ ಪ್ರೇಮ್, ಮಾ. 3ರಂದು ರಘುವನಹಳ್ಳಿಗೆ ಕರೆಸಿಕೊಂಡಿದ್ದ. ನಂತರ, ಸಮೀಪದ ಅಪಾರ್ಟ್‌ಮೆಂಟ್ ಸಮುಚ್ಛಯವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿನ ಸೆಕ್ಯೂರಿಟಿ ಗಾರ್ಡ್ ರಾಮ್ ಬಹದ್ದೂರ್ ಎಂಬಾತನ ಮನೆಯ ಕೊಠಡಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ . ಅಲ್ಲದೇ ಇಂದು ಕೊಠಡಿಯಲ್ಲೇ ಇರು. ನಾಳೆ ಬಂದು ಕರೆದುಕೊಂಡು ಹೋಗಿ ಕೆಲಸ ಕೊಡಿಸುತ್ತೇನೆ’ ಎಂದು ಹೇಳಿ ಪ್ರೇಮ್‌ ಅಲ್ಲಿಂದ ಹೊರಟು ಹೋಗಿದ್ದ. ನಂತರ, ಅದೇ ಕೊಠಡಿಗೆ ಬಂದಿದ್ದ ಕಾರ್ಮಿಕ ಬಿಮಲ್ ಸಹ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಅದರಿಂದ ನೊಂದ ಮಹಿಳೆ, ಮರುದಿನ ಪ್ರೇಮ್‌ಗೆ ಕರೆ ಮಾಡಿದ್ದರು. ಆತನ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಪರಸ್ಪರ ಪರಿಚಯವಿದ್ದ ಆರೋಪಿಗಳು, ಮಹಿಳೆಗೆ ಕೆಲಸ ನೀಡುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: