ಪ್ರಮುಖ ಸುದ್ದಿ

ಡಿಸಿಸಿ ಬ್ಯಾಂಕ್ ನೂತನ ಎಂ.ಡಿ.ಯಾಗಿ ನರಸಿಂಹಮೂರ್ತಿ

ರಾಜ್ಯ(ಮಡಿಕೇರಿ) ಮಾ. 12: –  ಮಡಿಕೇರಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ (ಡಿಸಿಸಿ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎಂ.ಡಿ.ನರಸಿಂಹಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ.

ಬ್ಯಾಂಕ್ ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ನೂತನವಾಗಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನರಸಿಂಹಮೂರ್ತಿ ಅವರನ್ನು   ಸರಳ ಕಾರ್ಯಕ್ರಮದಲ್ಲಿ ಅಭಿನಂದಿಸಿದರು. ಈ ಸಂದರ್ಭ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಡಿ.ಭಾಸ್ಕರಾಚಾರಿ  ಹಾಜರಿದ್ದರು. ನರಸಿಂಹಮೂರ್ತಿ ಈ ಮೊದಲು ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರಾಗಿ  ಕಾರ್ಯನಿರ್ವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: