ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು ಮಾ.13:-  ನಂಜನಗೂಡು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ  ಮಾರ್ಚ್ 13 ರಂದು 66/11 ಕೆ.ವಿ ಮಲಿಯೂರು ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾರ್ಚ್ 14 ರಂದು 66/11 ಕೆ.ವಿ. ಪರಿಣಾಮಿಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 13 ಮತ್ತು 14 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ತಲಕಾಡು, ಬಿ.ಶೆಟ್ಟಳ್ಳಿ, ಬನವೆ, ದೊಡ್ಡಪುರ, ಹೆಮ್ಮಿಗೆ, ಕರವಟ್ಟಿ. ಚಿದ್ರವಳ್ಳಿ ಮತ್ತು ದೊಡ್ಡಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು  ನಂಜನಗೂಡು ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: