ದೇಶ

ಮೊದಲ ಟ್ವಿಟ್ ನಲ್ಲಿ `ಗಾಂಧೀಜಿ ಮತ್ತು ಅವರ ಅಹಿಂಸಾ ತತ್ವ’ವನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ

ನವದೆಹಲಿ,ಮಾ.13-ಟ್ವಿಟರ್ ಖಾತೆ ತೆರೆದು ಒಂದು ತಿಂಗಳ ಬಳಿಕ ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ಟ್ವಿಟ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ ಮೊದಲ ಟ್ವಿಟ್ ನಲ್ಲಿ ಗಾಂಧೀಜಿ ಮತ್ತು ಅವರ ಅಹಿಂಸಾ ತತ್ವವನ್ನು ಉಲ್ಲೇಖಿಸಿದ್ದಾರೆ. `ಸಾಬರಮತಿಯ ಸರಳ ಘನತೆಯಲ್ಲಿ, ಸತ್ಯ ಜೀವಂತವಾಗಿದೆ’ ಎಂದು ಇವರು ಮಾಡಿರುವ ಟ್ವೀಟ್‌ಗೆ 10 ಸಾವಿರ ಲೈಕ್ ಬಂದಿದೆ. 3,000 ಮಂದಿ ಇದನ್ನು ಮರು ಟ್ವಿಟ್ ಮಾಡಿದ್ದಾರೆ.

ಕೆಲ ಕ್ಷಣದ ನಂತರ ಮಾಡಿದ ಮತ್ತೊಂದು ಟ್ವಿಟ್ ನಲ್ಲಿ ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮದ ಚಿತ್ರವನ್ನೂ ಸೇರಿಸಿ ರಾಷ್ಟ್ರಪಿತನ ಘೋಷಣೆಯೊಂದನ್ನು ಉಲ್ಲೇಖಿಸಿದ್ದಾರೆ. `ಹಿಂಸೆಗೆ ನನ್ನ ಆಕ್ಷೇಪವಿದೆ ಏಕೆಂದರೆ, ಇದು ಒಳ್ಳೆಯದರಂತೆ ಕಾಣಬಹುದು. ಆದರೆ ಈ ಒಳ್ಳೆಯ ಅಂಶ ತಾತ್ಕಾಲಿಕ. ಆದರೆ ಇದರಿಂದಾಗುವ ದುಷ್ಟತೆ ಖಾಯಂ ಆಗಿ ಇರುತ್ತದೆ’ ಎಂದು ಹೇಳಿದ್ದಾರೆ.

ಎರಡನೇ ಟ್ವಿಟ್‌ಗೂ ಭಾರಿ ಸ್ಪಂದನೆ ಸಿಕ್ಕಿದ್ದು, 8.000 ಮಂದಿ ಲೈಕ್ ಮಾಡಿ, 1,000 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೆ.11ರಂದು ಟ್ವಿಟರ್ ಸೇರಿದ್ದ ಪ್ರಿಯಾಂಕಾ ಗಾಂಧಿ, ಕೇವಲ 10 ಗಂಟೆಗಳಲ್ಲಿ ಒಂದು ಲಕ್ಷ ಅನುಯಾಯಿಗಳನ್ನು ಗಳಿಸಿದ್ದರು. ಸದ್ಯ ಈ ಸಾಮಾಜಿಕ ಜಾಲತಾಣದಲ್ಲಿ ಅವರು ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: