ಪ್ರಮುಖ ಸುದ್ದಿಮೈಸೂರು

ರೈತ ಆತ್ಮಹತ್ಯೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯ

ಮೈಸೂರು, ಮಾ.13 : ರೈತರ ಮತ್ತು ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿರುವುದು ನಿರಾಶದಾಯಕವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಡೆಯದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಜೆ ಜವರೇಗೌಡ ಮನವಿ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೊಷ್ಠಿ ಯಲ್ಲಿ ಮಾತನಾಡಿದ ಅವರು ಸರ್ಕಾರ ಯಾವುದೇ ಇರಲಿ ಈ ಹಿಂದಿನಿಂದಲೂ ಅನೇಕ ರೀತಿಯ ರೈತರ ಅಭಿವೃದ್ಧಿಯ ಪರ ಘೋಷಣೆ ಮಾಡುತ್ತಿರುತ್ತದೆ ಆದರೆ ರೈತೆ ನೈಜ ಸಮಸ್ಯೆಗಳಿಗೆ ಯಾವುದೇ ಸರ್ಕಾರಗಳು ಸ್ಪಂದಿಸದಿರುವುದರಿಂದ ಆತ್ಮಹತ್ಯೆಗಳನ್ನು ತಪ್ಪಿಸಲು ಆಗುತ್ತಿಲ್ಲ,

ರೈತರ ಪರವಾದ ಯಾವುದೇ ಯೋಜನೆಗಳನ್ನು ಕೈಗೊಂಡರು ಜನ ಪ್ರತಿನಿಧಿಗಳು ಕಾಯ ,ವಾಚ ಮನಸಾ ರೈತರಿಗೆ ಸ್ಪಂದನಾ ಪೂರ್ವಕವಾ ಅಭಿವೃದ್ಧಿ ಪೂರ್ವಕವಾದ ಯೋಜನೆಗಳಾಗಿರದೆ ಇರುವುದರಿಂದ ವಿಫಲವಾಗುತ್ತಿವೆ.

ತುಂಡು ಭೂಮಿ ಕಾಯ್ದೆ ಅಡಿಯಲ್ಲಿ ರೈತರು ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಭೂಮಿಗಳನ್ನು ಮಾರಾಟ ಮಾಡಲು ಆಗದಿರುವುದು , ರೈತರು ತುಂಡು ಭೂಮಿ ಕಾಯ್ದೆ ರದ್ದು ಪಡಿಸಿ ಮಾರಾಟ ಮಾಡಲು ಸರಳೀಕರಣಗೊಳಿಸುವುದು ರೈತರ ಆತ್ಮಹತ್ಯೆ ತಪ್ಪಿಸಲು‌ ಒಂದು ಉಪಕ್ರಮವಾಗಿದೆ ,

ಪ್ರತಿ ಸರ್ಕಾರಗಳು ಆಯವ್ಯಯ ಸಂದರ್ಭದಲ್ಲಿ ಮತ್ತು ಚುನಾವಣಾ ಸಂಧರ್ಭದಲ್ಲಿ ಹೊಸ ತಾಲ್ಲೂಕು ಘೋಷಣೆ ಮಾಡುತ್ತವೆ , ಇವುಗಳು ವೈಜ್ಞಾನಿಕವಾಗಿರದೇ ಕೇವಲ ಪ್ರತಿಷ್ಠೆ ಮತ್ತು ಚುನಾವಣಾ ಗಿಮಿಕ್ ಗಳು, ರೈತರ ಶೋಷಣೆಯ ಮತ್ತೊಂದು ಮುಖವಾಡವಾಗಿರುತ್ತದೆ , ಆದ್ದರಿಂದ ಹೊಸ ತಾಲ್ಲೂಕುಗಳ ರಚನೆಯನ್ನು ವೈಜ್ಞಾನಿಕವಾಗಿ ಮತ್ತು ಆ ಭಾಗಗಳ ರೈತರೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ರಚಿಸಿದರೆ ಸೂಕ್ತ ವಾಗಿರುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್ ದೇವರಾಜ್ , ಕೆನ್ ನಾಗರಾಜು , ಅಭಿಷೇಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: