ಮೈಸೂರು

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸರ್ಕಾರದ ಅನುಮತಿ ಪಡೆಯದೆ ಹಿಂದಿನ ದಿನಾಂಕ ನಮೂದಿಸಿ ಅಕ್ರಮ ನೇಮಕಾತಿ : ಚುನಾವಣಾಧಿಕಾರಿಗೆ ಪತ್ರ

ಮೈಸೂರು,ಮಾ.13:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಉಪಕುಲಪತಿಗಳ ಅವಧಿ ವಿಸ್ತರಣೆಯ ವಿಚಾರವಾಗಿ ಹಾಗೂ ಸರ್ಕಾರದ ಅನುಮತಿ ಪಡೆಯದೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಹಿಂದಿನ ದಿನಾಂಕ ನಮೂದಿಸಿ ಅಕ್ರಮ ನೇಮಕಾತಿ ವಿಚಾರವಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ವ್ಯಕ್ತಿಯೋರ್ವರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು ಉಪಕುಲಪತಿಗಳಾದ ಪ್ರೊ.ಶಿವಲಿಂಗಯ್ಯನವರ ಅವಧಿಯನ್ನು ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ರಾಜ್ಯಪಾಲರ ಕಛೇರಿಯಿಂದ   11-03-2019 ರಂದು ಅಧಿಸೂಚನೆ  ಹೊರಡಿಸುವ ಮೂಲಕ ಮುಂದುವರೆಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಉಪ ಕುಲಪತಿಳಾಗಿದ್ದ ಪ್ರೊ.ಶಿವಲಿಂಗಯ್ಯನವರ ಮೂರು ವರ್ಷದ ಅವಧಿ  10-03-2019 ರಂದು ಕೊನೆಗೊಳ್ಳುವುದಿತ್ತು. ಅಂದು ಅಂದರೆ   10-03-2019 ಭಾನುವಾರ ಸಾರ್ವತ್ರಿಕ ರಜಾದಿನ ಅದರ ಹಿಂದಿನ ದಿನ 09-03-2019 ಎರಡನೇ ಶನಿವಾರ, ಕಛೇರಿಗೆ ರಜಾದಿನ, ಆದ್ದರಿಂದ ಅವರಅವಧಿ ಮುಂದುವರೆಯುವ ವಿಚಾರವಾಗಿ  ರಾಜ್ಯಪಾಲರ ಕಛೇರಿಯಿಂದಯಾವುದೇ ಮಾಹಿತಿ ಬರದಿದ್ದರಿಂದ ಕಛೇರಿಗೆ ಕೆಲಸದ ದಿನವಾದ   08-03-2019 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಧಿನಿಯಮ, 1992 ರಎರಡನೇ ಅನುಸೂಚಿಯ ಮೊದಲನೇ ಪರಿನಿಯಮದ 6ನೇ ಉಪನಿಯಮದ  ಪ್ರಕಾರ ಉಪಕುಲಪತಿಗಳು ಕುಲಸಚಿವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿ ಹೋಗಬೇಕಾಗಿತ್ತು,  ಆದರೆ, ಉಪಲುಪತಿಗಳಾದ ಪ್ರೊ.ಶಿವಲಿಂಗಯ್ಯನವರು ಕಚೇರಿಗೆ ರಜಾದಿನವಾದ  09-03-2019 ಹಾಗೂ 10-03-2019 ರಂದು ಅದೂ   10-03-2019 ರಚುನಾವಣಾ ನೀತಿ ಸಂಹಿತೆಜಾರಿಯಾದ ನಂತರವೂ ನೂರಾರು ಅಕ್ರಮ ನೇಮಕಾತಿಗಳನ್ನು   ಮಾಡಿರುತ್ತಾರೆ. ಹೊಸ ಕುಲಪತಿಗಳ ಆಯ್ಕೆಗೋಸ್ಕರ   08-03-2019 ರಂದು ಶೋಧನ ಸಮಿತಿಯ ಸಭೆ ನಡೆದು ಸಮಿತಿಯು ಕೆಲ ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಹೊಸದಾಗಿ ಕುಲಪತಿ ಆಯ್ಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡ  ಬಂದಿರುವುದಾದರೆ, ಪ್ರೊ. ಶೀವಲಿಂಗಯ್ಯನವರನ್ನು   11-03-2019 ರಂದು ಅಧಿಸೂಚನೆ  ಹೊರಡಿಸುವ ಮೂಲಕ ಮುಂದುವರಸಿರುವುದೂ ತಪ್ಪು, ಅಧಿಸೂಚನೆಯು ಪ್ರಕಟಗೊಂಡ ದಿನಾಂಕ 11-03-2019 ಎಂದು ಇದೆ. ಆದ್ದರಿಂದ ಇದು ಒಂದು ಜನಾಂಗದ ಮತ ಪಡೆಯಲು ಉತ್ತೇಜಿಸಿದ ರೀತಿ ಇದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯ್ದೆಯಲ್ಲಿ (ಈ ಹಿಂದೆ ತಿಳಿಸಿದಂತೆ) ಅವರ ಅನುಪಸ್ಥಿತಿಯಲ್ಲಿ ಕುಲಸಚಿವರು ಕೆಲಸ ನಿರ್ವಹಿಸಲು ಅವಕಾಶ ಇದ್ದರೂ ಚುನಾವಣಾ ದಿನಾಂಕ ಪ್ರಕಟಗೊಂಡ ನಂತರವೂ ಅಧಿಸೂಚನೆ ಹೊರಡಿಸಿರುವುದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಹಿಂದಿನ ದಿನಾಂಕ ನಮೂದಿಸಿ ನೂರಾರು ಅಕ್ರಮ ನೇಮಕಾತಿಯನ್ನು ಮಾಡಲಾಗಿದೆ.

10-03-2019ರಂದು ಚುನಾವಣಾ ನೀತಿ ಸಂಹಿತೆ ಜಾರಿ ಆದ ನಂತರ ಪ್ರೊ.ಶಿವಲಿಂಗಯ್ಯನವರು ನೂರಾರು ತಾತ್ಕಾಲಿಕ ನೌಕರರುಗಳಾಗಿ   ಅಕ್ರಮ ನೇಮಕಾತಿಯನ್ನು ಮಾಡಿರುತ್ತಾರೆ. ಜನವರಿ 2019 ಹಾಗೂ ಫೆಬ್ರವರಿ 2019 ರ ವೇತನ ಪಾವತಿಯನ್ನು ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಣಕಾಸು ವಿಭಾಗದಲ್ಲಿ ಪರಿಶೀಲಿಸಿ. ಈ ಎರಡು ತಿಂಗಳ ವೇತನ ಪಾವತಿ ಆಗದೆ ಉಳಿದ ನೌಕರರೆಲ್ಲ ಚುನಾವಣಾ ನೀತಿ ಸಂಹಿತೆ ಜಾರಿ ಆದ ನಂತರ ಹಿಂದಿನ ದಿನಾಂಕ ನಮೂದಿಸಿ ಅಕ್ರಮ ನೇಮಕಾತಿ ಆಗಿರುವವರು.ಈ ಎಲ್ಲಾ ನೇಮಕಾತಿಗಳನ್ನು ತಾವುಗಳು ರದ್ದು ಪಡಿಸಬೇಕು. ಈ ಅಕ್ರಮ ನೇಮಕಾತಿಗಳಲ್ಲಿ ಲಕ್ಷಾಂತರ ಹಣದ ವ್ಯವಹಾರವಾಗಿದೆ. ಇದರಜೊತೆಗೆ   07-03-2019 ರಿಂದ 11-03-2019 ರ ವರೆಗಿನ ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆಡಳಿತ ಭವನ Video Footage ಗಳನ್ನು ತಮ್ಮ ವಶಕ್ಕೆ ಪಡೆದು ಪರಿಶೀಲಿಸಿ ಇದರ ಜೊತೆಗೆ ವಿಶ್ವವಿದ್ಯಾನಿಲಯದ ವ್ಯನಸ್ಥಾಪನಾ ಮಂಡಳಿಯ ಸದಸ್ಯರಾಗಿರುವ ಶಾಸಕರುಗಳು ಒಂದೇ ಪಕ್ಷಕ್ಕೆ ಸೇರಿದ ಕೆಲವು ಕಾರ್ಯಕರ್ತರನ್ನು ಈ ಅಕ್ರಮ ನೇಮಕಾತಿಯಲ್ಲಿ ಸೇರಿಸಿದ್ದಾರೆ.

ಸರ್ಕಾರಿಆದೇಶ ಸಂಖ್ಯೆ: ಆಇ6ಟಿ.ಎಫ್.ಪಿ 2018, ಬೆಂಗಳೂರು 29-12-2018ರಂದುಇನ್ನು ಮುಂದೆ ವಿಶ್ವವಿದ್ಯಾನಿಲಯಗಳು ಯಾವುದೇ ಮಂಜೂರಾದ ಹುದ್ದೆಗಳ ಎದುರಾಗಿ ತಾತ್ಕಾಲಿಕ ಹುದ್ದೆಗಳನ್ನು ತುಂಬುವಾಗ ಸರ್ಕಾರದ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಇದನ್ನು ಪಾಲಿಸಲಾಗಿಲ್ಲ. ಈ ಎರಡು ಪ್ರಕರಣಗಳು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲಂಘನೆಯಾಗಿದ್ದು,   ಕಾನೂನಿನ ರೀತಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: