ಪ್ರಮುಖ ಸುದ್ದಿ

ಸಂಸದ ಧೃವನಾರಾಯಣ್ ಅವರಿಗೆ ನಮ್ಮ ಬೆಂಬಲ ಎಂದ್ರು ಚಾಮರಾಜನಗರ ಜಿಲ್ಲಾ ಅಲ್ಪಸಂಖ್ಯಾತರು

ರಾಜ್ಯ(ಚಾಮರಾಜನಗರ)ಮಾ.13:- ಜಿಲ್ಲಾ ಅಲ್ಪಸಂಖ್ಯಾತರ ಜೊತೆ ಸಂಸದರು ಸಂವಾದ ನಡೆಸಿದರು.

ನಗರದ ರತ್ನೇಶ್ವರಿ ರೆಸಿಡೆನ್ಶಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಲೋಕ ಸಮರದಲ್ಲಿ ಧೃವ ನಾರಾಯಣ ಅವರ ಜಯಕ್ಕಾಗಿ ಮುಸ್ಲಿಂ ಸಮುದಾಯ  ಒಕ್ಕೊರಲ ನಿರ್ಧಾರ ವ್ಯಕ್ತಪಡಿಸಿದೆ.  ಚಾಮರಾಜನಗರ ಜಿಲ್ಲೆಯಲ್ಲಿ ಸಮುದಾಯವನ್ನು ಕಾಂಗ್ರೆಸ್ ಸಾಕಷ್ಟು ಅಭಿವೃದ್ಧಿ ಮಾಡಿದೆ. ಸಂಕಷ್ಟದ ದಿನಗಳಲ್ಲಿ ರಾಜ್ಯದಲ್ಲಿ, ಕಾಂಗ್ರೆಸ್ ಸರ್ಕಾರ ಸಮುದಾಯದ ಒಳಿತಿಗಾಗಿ ಶ್ರಮಿಸಿದೆ. ನಮ್ಮ ಜಿಲ್ಲೆಯಲ್ಲಿ ಸಂಸದ ಧೃವನಾರಾಯಣ್ ಸಕ್ರೀಯ ರಾಜಕಾರಣಿಯಾಗಿದ್ದಾರೆ. ಈ ಲೋಕ ಸಮರದಲ್ಲಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ. ಧೃವ ಯಾವತ್ತಿದ್ದರೂ ಧೃವತಾರೆಯಾಗಿಯೇ ಈ ಲೋಕಸಭಾ ಕ್ಷೇತ್ರದಲ್ಲಿ ಮಿನುಗುತ್ತಿರುತ್ತಾರೆ.  ನಮ್ಮೆಲ್ಲರ ಸಹಕಾರ ಧೃವನಾರಾಯಣ್ ಅವರಿಗೆ ಯಾವಾಗಲೂ ಇದ್ದೇ ಇರುತ್ತದೆ ಎಂದು ಜಿಲ್ಲೆಯಾದ್ಯಂತ ಸೇರಿದ ಮುಸ್ಲಿಂ ಸಮುದಾಯದ ಮುಖಂಡರು ಒಮ್ಮತದ ನಿಲುವು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: