ಸುದ್ದಿ ಸಂಕ್ಷಿಪ್ತ

ನಾಳೆಯಿಂದ ನಂದೀಶ್ವರ ಅಷ್ಟಾಹ್ನಿಕ ಪರ್ವ

ಮೈಸೂರು,ಮಾ.13 : ಶ್ರೀ ದಿಗಂಬರ ಜೈನ ಸಮಾಜ, ಪದ್ಮಶ್ರೀ ಜೈನ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಫಾಲ್ಗುಣ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವವನ್ನು ನಾಳೆಯಿಂದ 21ರವರೆಗೆ ಏರ್ಪಡಿಸಲಾಗಿದೆ.

ಮಾ.14ರ ಸಂಜೆ 6.45ಕ್ಕೆ ಶಾಂತೀಶ್ವರಸ್ವಾಮಿ ಬಸದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಅನಂತರಾಜ್ ಉದ್ಘಾಟಿಸುವರು. ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್ ಮುಖ್ಯ ಅತಿಥಿಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: