ಮೈಸೂರು

ನೂತನ ಡಿಎಚ್ಓ ಆಗಿ ಡಾ.ವೆಂಕಟೇಶ್  ಅಧಿಕಾರ ಸ್ವೀಕಾರ

ಮೈಸೂರು,ಮಾ.14:- ಮೈಸೂರು ಜಿಲ್ಲೆಗೆ ನೂತನ ಆರೋಗ್ಯ ಆಧಿಕಾರಿಯನ್ನು ನೇಮಕ ಮಾಡಲಾಗಿದೆ . ನೂತನ ಡಿಎಚ್ಓ ಆಗಿ ಡಾ.ವೆಂಕಟೇಶ್  ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಡಾ‌.ಬಿ.ಬಸವರಾಜು ಅವರು ವರ್ಗಾವಣೆಯಾದ ಹಿನ್ನಲೆಯಲ್ಲಿ ಮೈಸೂರಿಗೆ ಡಾ.ವೆಂಕಟೇಶ್  ಅವರನ್ನು ನೂತನ ಆರೋಗ್ಯ ಆಧಿಕಾರಿಯಾಗಿ ನೇಮಕ ಮಾಡಲಾಗಿದೆ.  ಬಸವರಾಜು ಅವರು ಮಾ,8 ರಂದೇ ವರ್ಗಾವಣೆ ಗೊಂಡಿದ್ದರು.  ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದೀಗ ವೆಂಕಟೇಶ್ ಅವರು ತಡವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನೂತನ ಆರೋಗ್ಯಾಧಿಕಾರಿಯನ್ನು ಕೆ.ಆರ್ ಆಸ್ವತ್ರೆಯ ಆರ್.ಎಂ.ಒ ಡಾ.ರಾಜೇಶ್‌‌ ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ವೆಂಕಟೇಶ್ , ಮೈಸೂರು ವೈದ್ಯಕೀಯವಾಗಿ ಉತ್ತಮವಾಗಿದೆ‌‌. ನಾನೂ ಈಗಾಗಲೇ ಹಾಸನದಲ್ಲಿ ಆರೋಗ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ಗುರಿ ನನ್ನದು. ಇದರ ಜೊತೆಗೆ ತಾಲ್ಲೂಕು ಕೇಂದ್ರ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಿ ಕೆ.ಆರ್. ಆಸ್ಪತ್ರೆಯ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: