ಮೈಸೂರು

ಟೆಲಿಫೋನ್ ಅದಾಲತ್ ಮತ್ತು ಗ್ರಾಹಕರ ಮುಕ್ತ ಸಮಾವೇಶ

ಮೈಸೂರು ಮಾ.14:- ಮೈಸೂರು ನಗರದ ಜಯಲಕ್ಷ್ಮೀಪುರಂನಲ್ಲಿರುವ ಬಿ.ಎಸ್.ಎನ್.ಎಲ್ ನ  ಮಹಾ ಪ್ರಬಂಧಕರ ಕಚೇರಿಯಲ್ಲಿ ಟೆಲಿಫೋನ್ ಅದಾಲತ್ ಮತ್ತು ಗ್ರಾಹಕರ ಮುಕ್ತ ಸಮಾವೇಶವನ್ನು ಮಾರ್ಚ್ 28 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಅದಾಲತ್‍ನಲ್ಲಿ ಬಿ.ಎಸ್.ಎನ್.ಎಲ್‍ನ ಸ್ಥಿರ ದೂರವಾಣಿ  ಸಂಪರ್ಕಗಳನ್ನು ಒದಗಿಸುವುದು, ಬಿಲ್ಲಿಂಗ್ ಮತ್ತು ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಇತ್ಯರ್ಥಗೊಳಿಸಲಾಗುವುದು.  ಸಾಮಾನ್ಯ ಮಾರ್ಗಗಳನ್ನು ಅನುಸರಿಸಿ ಇಲ್ಲಿಯವರೆಗೆ ಇತ್ಯರ್ಥಗೊಳ್ಳದ ದೂರುಗಳನ್ನು ಕುರಿತು ಅಹವಾಲನ್ನು ಸಂಬಂಧಿಸಿದ  ದಾಖಲೆಗಳೊಂದಿಗೆ ಲಕೋಟೆಯ ಮೇಲೆ  ಅಹವಾಲು – ಟೆಲಿಫೋನ್ ಅದಾಲತ್ 2018-19 ಎಂದು ಬರೆದು  ಮಾರ್ಚ್ 20 ರೊಳಗೆ ಸಲ್ಲಿಸಬೇಕು.

ಟೆಲಿಫೋನ್ ಅದಾಲತ್ ಮತ್ತು ಗ್ರಾಹಕರ ಮುಕ್ತ ಸಮಾವೇಶವಾಗಿರುವುದರಿಂದ ಗ್ರಾಹಕರು ಸ್ಥಳದಲ್ಲೇ ನೀಡುವ ದೂರುಗಳನ್ನೂ ಸಹ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.  ಗ್ರಾಹಕರು ತಮ್ಮ ದೂರುಗಳನ್ನು ಪರಿಹರಿಸಿಕೊಳ್ಳಲು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2512345 ಸಂಪರ್ಕಿಸಿ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: