ಪ್ರಮುಖ ಸುದ್ದಿ

ಮದುವೆಯಾಗಿ ನಂಬಿಸಿ ಯುವತಿಗೆ ವಂಚನೆ

ರಾಜ್ಯ(ಧಾರವಾಡ)ಮಾ.14:- ಮದುವೆಯಾಗಿ ನಂಬಿಸಿ ವಂಚಿಸಿದ ಯುವಕನ ಮನೆ ಮುಂದೆ ಮೋಸ ಹೋದ ಯುವತಿ ಧರಣಿ ಕುಳಿತ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ನಗರದ ಹತ್ತಿಕೊಳ್ಳ ಬಡಾವಣೆಯಲ್ಲಿನ ಯುವಕ ಅಭಿಷೇಕ ಪಾಟೀಲ್ ಮನೆ ಮುಂದೆ ನ್ಯಾಯಕ್ಕಾಗಿ ಯುವತಿ ಮತ್ತು ಕುಟುಂಬಸ್ಥರು ಧರಣಿಗೆ ಕುಳಿತಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಒಂದೂವರೆ ವರ್ಷದ ಹಿಂದೆ ಮನೆಯಲ್ಲಿನ ದೇವರ ಗದ್ದುಗೆ ಮುಂದೆ ಮದುವೆಯಾಗಿದ್ದಾರೆ. ಆದರೆ ಈಗ ಯುವಕನ ಪೋಷಕರ ವಿರೋಧದ ಹಿನ್ನೆಲೆ ಯುವತಿಯನ್ನು ದೂರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಆದರೆ ನಾವು ಮದುವೆಯಾಗಿಲ್ಲವೆಂದು ಅಭಿಷೇಕ್ ಹೇಳಿದ್ದಾನೆ. ಮೂಲತಃ ಗುಲ್ಬರ್ಗ ಮೂಲದ ನಿವಾಸಿಯಾಗಿರುವ ಯುವತಿ ಕುಟುಂಬಸ್ಥರು ಹುಬ್ಬಳ್ಳಿಯ ಅಶ್ವಮೇಧ ಲೇಔಟ್ ನಲ್ಲಿ  ವಾಸವಾಗಿದ್ದಾರೆ. ಆದರೆ ಈ ಘಟನೆ ಬಳಿಕ ಯುವತಿಯನ್ನು ಮನೆಯವರು ದೂರ ಮಾಡಿದ್ದಾರೆ. ಹೀಗಾಗಿ ನಡುಬೀದಿಯಲ್ಲಿ ನನ್ನ ಬದುಕು ನಿಂತಿದೆ. ಅಭಿಷೇಕ್ ಮಾತಿನಂತೆ ನನ್ನ ಮದುವೆಯಾಗಬೇಕು ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೂರುವುದಾಗಿ ಯುವತಿ ಎಚ್ಚರಿಕೆ ನೀಡಿದ್ದಾಳೆ.   ಯುವತಿಯ ಸಹಾಯಕ್ಕೆ ಡಿಎಸ್.ಎಸ್. ಸಂಘಟನೆಯೂ   ನಿಂತಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: