
ಕ್ರೀಡೆ
ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವಿಆರ್ವಿ ಸಿಂಗ್
ಚಂಢೀಗಢ,ಮಾ.14-ಭಾರತದ ವೇಗದ ಬೌಲರ್ ವಿಆರ್ವಿ ಸಿಂಗ್ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಚಂಢೀಗಢ ಮೂಲದ ವಿಕ್ರಮ್ ರಾಜ್ ವೀರ್ ಸಿಂಗ್ 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಅವರು ಒಟ್ಟು 5 ಪಂದ್ಯಗಳನ್ನು ಆಡಿದ್ದಾರೆ.
2007ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆಡಿದರೂ ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಇನ್ನು 2 ಏಕದಿನ ಪಂದ್ಯಗಳಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ವಿಕೆಟ್ ಕಬಳಿಸಲು ವಿಫಲರಾಗಿದ್ದರು. ಇಂಗ್ಲೆಂಡ್ ವಿರುದ್ಧ ಜೆಮ್ಶೆಡ್ಪುರದಲ್ಲಿ ಏಕದಿನಕ್ಕೆ ಪಾದಾರ್ಪಣೆ ಮಾಡಿದ ಸಿಂಗ್, ಇಂದೋರ್ನಲ್ಲಿ ಏಕದಿನದಿಂದಲೂ ದೂರ ಉಳಿದರು.
ವಿಆರ್ವಿ ಸಿಂಗ್ ಐಪಿಎಲ್ನ ಮೊದಲ 3 ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದರು. 29 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಸಿಂಗ್, 121 ವಿಕೆಟ್ ಕಬಳಿಸಿದ್ದಾರೆ. 2014ರಲ್ಲಿ ಕೊನೆ ಬಾರಿಗೆ ರಣಜಿ ಟ್ರೋಫಿ ಆಡಿದ್ದರು. ಗಾಯದ ಸಮಸ್ಯೆಯಿಂದ ಹಲವು ಬಾರಿ ತಂಡದಿಂದ ಹೊರಗುಳಿದಿದ್ದ ಸಿಂಗ್, ಇದೀಗ ಎಲ್ಲಾ ಮಾದರಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. (ಎಂ.ಎನ್)