
ಮೈಸೂರು
ಮನೆಯ ಕೀಲಿಯನ್ನೇ ಕಳ್ಳತನ ಮಾಡಿ ಮನೆಯೊಳಗಿದ್ದ 1.45ಲಕ್ಷರೂ.ಮೌಲ್ಯದ ಚಿನ್ನಾಭರಣ ಕಳುವು
ಮೈಸೂರು,ಮಾ.14:- ಮನೆಯ ಕೀಲಿಯನ್ನೇ ಕಳ್ಳತನ ಮಾಡಿ ಮನೆಯೊಳಗಿದ್ದ 1.45ಲಕ್ಷರೂ.ಮೌಲ್ಯದ ಚಿನ್ನಾಭರಣ ಮತ್ತು 30,000ರೂ.ನಗದನ್ನು ಕಳ್ಳರು ಕಳುವು ಮಾಡಿದ ಘಟನೆ ಉದಯಗಿರಿಯಲ್ಲಿ ನಡೆದಿದೆ.
ಈ ಕುರಿತು ಮಂಜುಪ್ರಸಾದ್ ಎಂಬವರುಆಲನಹಳ್ಳಿಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. #715, 05 ನೇ ಕ್ರಾಸ್, ರಾಜ್ ಕುಮಾರ್ ರಸ್ತೆಯಲ್ಲಿ ಮಗಳ ಬಳಿ ಇದ್ದ ಮನೆಯ ಬೀಗದ ಕೀ ಮತ್ತು ಸ್ಕೂಟರ್ 28.02.2019 ರಂದು ಕಾಣೆಯಾಗಿದ್ದು 04.03.2019 ರಂದು ಮನೆಯ ಮುಂಭಾಗದಲ್ಲಿರುವ ತುಳಸಿ ಗಿಡದ ಪಕ್ಕದ ಪಾಟ್ ನಲ್ಲಿ ಸಿಕ್ಕಿ ದೆ. 11.03.19 ರಂದು ಬೆಳಿಗ್ಗೆ 8.30 ಕ್ಕೆ ಕೆಲಸಕ್ಕೆ ಹೋಗಿದ್ದು, ತನ್ನ ಪತ್ನಿಯು ಆಲನಹಳ್ಳಿಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಯೋಗ ಕ್ಲಾಸ್ ಗೆ ಬೆಳಿಗ್ಗೆ 10 ಗಂಟೆಗೆ ತೆರಳಿ ವಾಪಾಸ್ 12.30 ಕ್ಕೆ ಮನೆಗೆ ಬಂದಿರುತ್ತಾರೆ. ಮಗಳೂ ಸಹ ಬೆಳಿಗ್ಗೆ 8.30 ಕ್ಕೆ ಕಾಲೇಜಿಗೆ ತೆರಳಿದ್ದಾಳೆ. ಪತ್ನಿಯು 11.03.2019 ರಂದು ರಾತ್ರಿ 10.30 ಕ್ಕೆ ಬಟ್ಟೆ ಅಂಗಡಿಗೆ ಹಣ ಸಂದಾಯ ಮಾಡಲು ಬೀರುವಿನಲ್ಲಿಟ್ಟಿದ್ದ 30.000 ರೂಪಾಯಿಗಳನ್ನು ಕೊಡುವ ಸಲುವಾಗಿ ಬೀರುವಿನ ಬಾಗಿಲನ್ನು ತೆರೆದು ನೋಡಲಾಗಿ ಅದರಲ್ಲಿ ಇಟ್ಟಿದ್ದ 30.000 ರೂಪಾಯಿ ನಗದು ಹಣ ಕಾಣಿಸದೆ ಇದ್ದುದರಿಂದ ಬೆಳಿಗ್ಗೆ 6.30 ಕ್ಕೆ ಮಗಳನ್ನು ವಿಚಾರ ಮಾಡಿ ಮಗಳ ರೂಂನಲ್ಲಿದ್ದ ಬೀರುವಿನಲ್ಲಿ ಹುಡುಕಲಾಗಿ ಬೀರುವಿನಲ್ಲಿದ್ದ ಅಂದಾಜು 30.000ರೂ.ಬೆಲೆಯ ಒಂದು ಮುತ್ತಿನ ಸರ, 8 ಗ್ರಾಂ ತೂಕದ ಚಿನ್ನದ ಸರ ಅಂದಾಜು ಮೌಲ್ಯ 20.000ರೂ, ಎರಡು 20 ಗ್ರಾಂ ತೂಕದ ಬಂಗಾರದ ಬಳೆ ಅಂದಾಜು ಮೌಲ್ಯ 50.000 ರೂ.ಹಾಗೂ ಒಂದು ಚಿಕ್ಕದಾದ ವಜ್ರದ ಓಲೆ 15.000 ರೂ., ಈ ಎಲ್ಲಾ ವಸ್ತುಗಳನ್ನು ಬೀರುವಿಲ್ಲಿಟ್ಟಿದ್ದು, ಯಾರೋ ಕಳ್ಳರು ನಗದು ಮತ್ತು ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳ್ಳತನವಾಗಿರುವ ಬಾಬ್ತು 30.000 ರೂಪಾಯಿ ನಗದು ಹಣ ಮತ್ತು 1,15,000ರೂ.ಮೌಲ್ಯದ ಆಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)