ಮೈಸೂರು

2010ರಲ್ಲಿ ತೊಣಚಿಕೊಪ್ಪಲು ಬಿಸಿಲು ಮಾರಮ್ಮ ದೇವಾಲಯದ ಬಳಿ ನಡೆದ ಕೊಲೆ ಪ್ರಕರಣ : ಮೂವರನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ ನ್ಯಾಯಾಲಯ

ಮೈಸೂರು,ಮಾ.14:- 2010ರಲ್ಲಿ ತೊಣಚಿಕೊಪ್ಪಲು ಬಿಸಿಲು ಮಾರಮ್ಮ ದೇವಾಲಯದ ಬಳಿ ನಡೆದ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ  ಐದನೇ ಜಿಲ್ಲಾ ಮತ್ತು  ಸತ್ರ ನ್ಯಾಯಾಲಯ  ಮೂವರು ವ್ಯಕ್ತಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದು, ಆರು ಮಂದಿ ಆರೋಪಿಗಳೆಂದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಪರಾಧಿಗಳೆಂದು ಪರಿಗಣಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ.

ಇಂದು ಮತ್ತೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಚಂದ್ರು, ಸ್ವಾಮಿ, ಸುನಿಲ್ ಅವರನ್ನು ನಿರಪರಾಧಿಗಳೆಂದು ತೀರ್ಪು ನೀಡಿ, ಬಂಧಮುಕ್ತಗೊಳಿಸಿದ್ದು, ಉಳಿದ ಆರು ಮಂದಿ ಆರೋಪಿಗಳಾದ ಅಶೋಕ್, ಹೇಮಂತ್, ಮಂಜೇಶ್ಪ್ರವೀಣ್, ರಮೇಶ್, ಸೂರಜ್ ಇವರಿಗೆ ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನೆಲೆ

3.10.2010ರಲ್ಲಿ ಸರಸ್ವತಿಪುರಂ ಠಾಣಾ ವ್ಯಾಪ್ತಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಇರುವ ಮನೆಯೊಂದರಲ್ಲಿ ಕರಿಯಪ್ಪ ಎಂಬಾತನನ್ನು ಹನ್ನೊಂದು ಮಂದಿ ಸೇರಿ ಕೊಲೆಗೈದಿದ್ದರು. ಕರಿಯಪ್ಪ ಕೊಲೆ ಕೇಸೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಗರ ಪಾಲಿಕೆಯ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆ ಒಡನಾಟ ಹೊಂದಿದ್ದ ವ್ಯಕ್ತಿಯಾಗಿದ್ದ. ಕರಿಯಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹನ್ನೊಂದು ಮಂದಿಯನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದರು. ಹನ್ನೊಂದು ಮಂದಿಯಲ್ಲಿ ದೇವು ಮತ್ತು ವಿಜಯ್ ಎಂಬವರು ಸಾವನ್ನಪ್ಪಿದ್ದು, ಉಳಿದ ಆರೋಪಿಗಳಾದ ಅಶೋಕ್, ಹೇಮಂತ್, ಮಂಜೇಶ್, ಸುನಿಲ್, ಪ್ರವೀಣ್, ರಮೇಶ್, ಚಂದ್ರು, ಸೂರಜ್, ಸ್ವಾಮಿ ಇವರನ್ನು ಆಗಿನ ಠಾಣೆಯ ಇನ್ಸಪೆಕ್ಟರ್ ಆಗಿದ್ದ ಸಿದ್ದರಾಜು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೊಲೆ ಪ್ರಕರಣದ ತನಿಖೆಯನ್ನು ಸುದೀರ್ಘ ಒಂಭತ್ತು ವರ್ಷಗಳವರೆಗೆ ನಡೆಸಲಾಗಿತ್ತು. ಕಳೆದ .30 ವಾದ ಮಂಡನೆಯೂ ನಡೆದಿತ್ತು.  ಸರ್ಕಾರಿ ವಕೀಲ ಆನಂದ್ ಕುಮಾರ್ ವಾದ ಮಂಡಿಸಿದ್ದು, ಜೆ.ರಾಮಮೂರ್ತಿ, ಹೊಯ್ಸಳ, ದಿನೇಶ್ ಇನ್ನಿತರರು ಆರೋಪಿಗಳ ಪರ ವಾದ ಮಂಡಿಸಿದ್ದರು. ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ   ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ಮೂವರನ್ನು ನ್ಯಾಯಾಲಯ ನಿರಪರಾಧಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ.  (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: