ಮೈಸೂರು

ಶಾಲಾ ವಾಹನಕ್ಕೆ ಆಟೋ ಡಿಕ್ಕಿ:8 ವಿದ್ಯಾರ್ಥಿಗಳಿಗೆ ಗಾಯ: ಓರ್ವನ ಸ್ಥಿತಿ ಗಂಭೀರ

ಶಾಲಾ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ 8ಮಕ್ಕಳು ಗಾಯಗೊಂಡಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ  ಮೈಸೂರು ತಾಲೂಕಿನ ಜಟ್ಟಿಹುಂಡಿ ಬಳಿ ಮಂಗಳವಾರ ನಡೆದಿದೆ.

ಗಾಯಗೊಂಡವರನ್ನು  ಸೇಂಟ್ ಫ್ರಾನ್ಸಿಸ್ ಶಾಲೆಯ ವಿದ್ಯಾರ್ಥಿಗಳಾದ ದಾಸನಕೊಪ್ಪಲು ಗ್ರಾಮದ ಯಶಸ್, ಶ್ರೀನಿವಾಸಗೌಡ, ಅಮೂಲ್ಯ, ಧ್ರುವ, ಭರತ್, ಭಾನು, ಹರ್ಷ, ನಿತೀನ್ ಗೌಡ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಶಾಲೆ ಮುಗಿಸಿಕೊಂಡು ಮಾರುತಿ ಓಮ್ನಿ ವ್ಯಾನಿನಲ್ಲಿ ತೆರಳುತ್ತಿದ್ದಾಗ ಜಟ್ಟಿಹುಂಡಿ ಬಳಿ ಎದುರಿನಿಂದ ಬಂದ ಆಟೋ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ತಕ್ಷಣ ಗಾಯಗೊಂಡ ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡ ಮಕ್ಕಳಲ್ಲಿ ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ತಮ್ಮ ಮಕ್ಕಳು ಹಾಸಿಗೆಯಲ್ಲಿ ಗೋಳಾಡುವುದನ್ನು ನೋಡಿ ಕಣ್ಣೀರಾದರು. ಅಪಘಾತಕ್ಕೆ ಚಾಲಕನ ಅಜಾಗಕೂಕತೆಯೇ ಕಾರಣ ಎನ್ನಲಾಗಿದೆ.

ಇಲವಾಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: