ಮನರಂಜನೆ

ಕಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಬೆಂಗಳೂರು,ಮಾ.14-ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಈಗ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಕಾಲಿವುಡ್ ಗೆ ಕಾಲಿಟ್ಟಿದ್ದಾರೆ.

ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಮಂದಣ್ಣ, ನಟ ಕಾರ್ತಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನ ಮೂರು ಚಿತ್ರಗಳು ರಶ್ಮಿಕಾ ಬಳಿ ಇವೆ. ಇದರ ಜೊತೆಗೀಗ ತಮಿಳು ಅಭಿಮಾನಿಗಳನ್ನು ರಂಜಿಸಲು ತಮಿಳಿಗೆ ಕಾಲಿಟ್ಟಿರುವುದು ಕುತೂಹಲ ಮೂಡಿಸಿದೆ. ಬಗ್ಗೆ ಸ್ವತಃ ರಶ್ಮಿಕಾ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

ರಶ್ಮಿಕಾ ಮತ್ತು ನಟ ಕಾರ್ತಿ ಅಭಿನಯದ ಹೊಸ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಮುಹೂರ್ತದ ಒಂದಿಷ್ಟು ಫೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ರಶ್ಮಿಕಾ. ಜೊತೆಗೆಕಾಲಿವುಡ್ ವುಡ್ ಸಿನಿಮಾದಲ್ಲಿ ಮಾಡುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಸಮಯ ಈಗ ಬಂದಿದೆಎಂದು ಬರೆದುಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: