ಮನರಂಜನೆ

`ದೇವಕಿ’ ಸಿನಿಮಾದ ಟೀಸರ್ ರಿಲೀಸ್

ಬೆಂಗಳೂರು,ಮಾ.14-ನಟ ಉಪೇಂದ್ರ ಅವರ ಮಗಳು ಐಶ್ವರ್ಯ ಅಭಿನಯಿಸಿರುವ ದೇವಕಿ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿದೆ.

ಹೌರಬ್ರಿಡ್ಜ್ಸಿನಿಮಾ ಈಗದೇವಕಿಯಾಗಿ ಬದಲಾಗಿದೆ. ಐಶ್ವರ್ಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಲಾಂಚ್ ಆಗಿದ್ದಾರೆ. ನಟಿ ಪಾರೂಲ್ ಯಾದವ್ ಐಶ್ವರ್ಯ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ದೇವಕಿಟೀಸರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಮೇಕಿಂಗ್ ಹಾಗೂ ಸೌಂಡ್ ಎಷ್ಟೊಂದು ವಿಶೇಷವಾಗಿದೆ ಎಂಬುದನ್ನು ಟೀಸರ್ ಹೇಳುತ್ತಿದೆ. ನಿರ್ದೇಶಕ ಲೋಹಿತ್ ಮತ್ತೆ ತಮ್ಮ ಅದ್ಭುತ ಕೆಲಸವನ್ನು ತೆರೆ ಮೇಲೆ ತೋರಿಸಿದ್ದಾರೆ.

2K ಯಲ್ಲಿ ಟೀಸರ್ ಹೊರಬಂದಿದ್ದು, ಕ್ವಾಲಿಟಿಗೆ ದೊಡ್ಡ ಪ್ರಶಂಸೆ ಸಿಕ್ಕಿದೆ. ಸಿಕ್ಕಾಪಟ್ಟೆ ರಾ ಆಗಿ, ನೈಜತೆಯ ದೃಶ್ಯಗಳಿವೆ. ಇಡೀ ವಿಶ್ವದಲ್ಲಿಯೇಚಲ್ಡ್ ಟ್ರಾಕಿಂಗ್ದೊಡ್ಡ ಮಾಫಿಯಾ ಆಗಿದ್ದು, ವಿಷಯದ ಮೇಲೆ ಸಿನಿಮಾದ ಕಥೆ ಹೆಣೆಯಲಾಗಿದೆ.

ಪ್ರಿಯಾಂಕ ಉಪೇಂದ್ರ ದೇವಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಉಪೇಂದ್ರ ಮೊದಲ ಚಿತ್ರದಲ್ಲಿಯೇ ತಮ್ಮ ಪ್ರತಿಭೆ ತೋರಿಸಿದ್ದಾರೆ. ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದೇವಕಿ ಟೀಸರ್ ಗೆ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಟೀಸರ್ ಗೆ ಬಂದಿರುವ ಎಲ್ಲ ಕಮೆಂಟ್ಸ್ ಗಳು ಪಾಸಿಟಿವ್ ಆಗಿವೆ. ವೇಣು ಕ್ಯಾಮರಾ, ನೊಬಿನ್ ಪೌಲ್ ಸಂಗೀತ ಹಾಗೂ ಸಿ.ರವಿಚಂದ್ರನ್ ಸಂಕಲನ ಟೀಸರ್ ಹೈಲೈಟ್ ಆಗಿದೆ. ಆರ್ ಸಿ ಎಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗದ್ದು, ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. (ಎಂ.ಎನ್)

Leave a Reply

comments

Related Articles

error: