ಮನರಂಜನೆ

ತಂದೆಯಾದ ಸಂತಸದಲ್ಲಿದ್ದಾರೆ ರಿಯಾಝ್ ಬಾಷಾ

ಬೆಂಗಳೂರು,ಮಾ.14-ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿಯಾಗಿದ್ದ ರಿಯಾಝ್ ಬಾಷಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.

ರಿಯಾಝ್ ಬಾಷಾ ಹಾಗೂ ಆಯೆಷಾ ದಂಪತಿ ತಂದೆ ತಾಯಿಯಾದ ಸಂತಸದಲ್ಲಿ ಇದ್ದಾರೆ. ನಿನ್ನೆ ರಿಯಾಝ್ ಪತ್ನಿ ಆಯೆಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ.

ಮಗ ಬಂದ ಖುಷಿಯನ್ನು ರಿಯಾಝ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ‘ಸಿಹಿ ಸುದ್ದಿ ತಂದೆ.. ನಾನು ತಂದೆ ಮತ್ತು ಆಯೆಷಾ ತಾಯಿಯಾದೆವು.. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರಲಿ..’ ಎಂಬ ಸಾಲುಗಳ ಮೂಲಕ ತಮ್ಮ ಮನದ ಭಾವವನ್ನು ತಿಳಿಸಿದ್ದಾರೆ. ಮದ್ದು ಕಂದನ ಜೊತೆಗೆ ಮೊದಲ ಫೋಟೋವನ್ನು ಹಾಕಿದ್ದಾರೆ.

ರಿಯಾಝ್ ರೇಡಿಯೋ ಜಾಕಿ ಹಾಗೂ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಬಾಲಿವುಡ್ ತಾರೆಯರ ಎಷ್ಟೋ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ತಮ್ಮ ನಿರೂಪಣೆಯ ಮೂಲಕ ಗಮನ ಸೆಳೆದಿದ್ದರು. ಇಂತಹ ಕನ್ನಡದ ಪ್ರತಿಭೆ ‘ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಿತರಾದರು. (ಎಂ.ಎನ್)

Leave a Reply

comments

Related Articles

error: