ಕರ್ನಾಟಕಪ್ರಮುಖ ಸುದ್ದಿ

ಎಲ್ಲಾ ಇಲಾಖೆಗಳು ನಿರಂತರವಾಗಿ ಮತದಾನದ ಜಾಗೃತಿ ಮೂಡಿಸಬೇಕು: ಜಿ.ಪಂ ಸಿ.ಇ.ಓ

ಹಾಸನ (ಮಾ.15): ಎಲ್ಲಾ ಇಲಾಖೆಗಳು ನಿರಂತರವಾಗಿ ಮತದಾರರ ಜಾಗೃತಿ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ಪೀಪ್ ಸಮಿತಿ ಅಧ್ಯಕ್ಷರಾದ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ನಿರ್ದೇಶನ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾ.13ರಂದು ಸ್ಪೀಪ್ ಚಟುವಟಿಕೆಗಳನ್ನು ಚುರುಕುಗೊಳಿಸುವ ಕುರಿತಂತೆ ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು, ಎಲ್ಲ ಇಲಾಖೆಗಳು ಇದರಲ್ಲಿ ಸಂಪೂರ್ಣ ಸಕ್ರಿಯವಾಗಿ ಪಾಲ್ಗೋಳ್ಳಬೇಕು. ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಪ್ರತಿ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ವಿಭಿನ್ನಾ ರೀತಿಯ ಹಾಗೂ ಪರಿಣಾಮಕಾರಿಯಾದ ಮತದಾರರ ಜಾಗೃತಿ ಚಟುವಟಿಕೆಗಳು ನಡೆಯಬೇಕು ಎಂದು ಸೂಚಿಸಿದರು.

ಇಲಾಖೆಗಳು ದೈನಂದಿನ ಕಾರ್ಯ ಚಟುವಟಿಕೆ ಜೊತೆಗೆ ತಮ್ಮ ಸಂಪರ್ಕಕ್ಕೆ ಬರುವ ಮತದಾರರಿಗೆ ಲೋಕಸಭಾ ಚುನಾವಣೆ ದಿನಾಂಕ ಹಾಗೂ ನೈತಿಕ ಮತದಾನದ ಮಹತ್ವದ ಅರಿವು ಮೂಡಿಸಿ ಎಂದು ಅವರು ತಿಳಿಸಿದರು.

ಆಕಾಶವಾಣಿ, ಸುದ್ಧಿಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮತದಾರರ ಜಾಗೃತಿ ಅಭಿಯಾನ ಚುರುಕುಗೊಳಿಸಿ ಪ್ರತಿ ಮನೆ ಮನೆಗಳಲ್ಲಿ ಮತದಾರರ ಜಾಗೃತಿ ಸಂದೇಶಗಳು ತಲುಪಬೇಕು ಎಂದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಅರುಣ್ ಕುಮಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: