ಮನರಂಜನೆ

ನಟಿ ಪಾರೂಲ್ ಯಾಧವ್ ಮೇಲೆ ಬೀದಿ ನಾಯಿ ದಾಳಿ

ಪ್ಯಾರ್‍ಗೆ ಆಗ್ಬೀಡ್ಯತೇ ಖ್ಯಾತಿಯ ನಟಿ ಪಾರೂಲ್ ಯಾಧವ್ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆಯು ಈಚೆಗೆ ಜರುಗಿದೆ.

ಸ್ಯಾಂಡಲ್‍ವುಡ್‍ನಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ತಮ್ಮ ಛಾಪು ಮೂಡಿಸಿರುವ ಈಕೆ ಕಳೆದ ಸೋಮವಾರ ಸಂಜೆ ತಮ್ಮ ಸಾಕು ನಾಯಿಯೊಂದಿಗೆ ವಾಯುವಿಹಾರಕ್ಕೆಂದು ತೆರಳಿದ್ದ ಸಮಯದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದು, ಸಾಕು ನಾಯಿಯನ್ನು ರಕ್ಷಿಸುವಾಗ ಬೀದಿ ನಾಯಿಗಳು ಈಕೆಯ ಮೇಲೆಯೂ ದಾಳಿ ನಡೆಸಿ ತಲೆ,ಕೈ ಕಾಲುಗಳಿಗೆ ತೀವ್ರ ಗಾಯಗೊಳಿಸಿವೆ. ಈ ಸಂದರ್ಭದಲ್ಲಿ ಈಕೆಯ ರಕ್ಷಣೆಗೆ ಯಾರೊಬ್ಬರು ಮುಂದಾಗಿಲ್ಲ,  ಅಲ್ಲದೇ ಸುಮಾರು 15 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿಯೇ ಒದ್ದಾಡಿರುವ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ.

ಚಿಕಿತ್ಸೆಗಾಗಿ ಮುಂಬೈನ ಕೋಕಿಲಾ ಬೆಹನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಮುಂಬೈನಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದರು.

Leave a Reply

comments

Related Articles

error: