ಕ್ರೀಡೆದೇಶ

ಶ್ರೀಶಾಂತ್ ಗೆ ವಿಧಿಸಿದ್ದ ಆಜೀವ ನಿಷೇಧ ಹಿಂಪಡೆದ ಸುಪ್ರೀಂ ಕೋರ್ಟ್

ನವದೆಹಲಿ,ಮಾ.15-ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಗೆ ವಿಧಿಸಲಾಗಿರುವ ಆಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆ.

ಶ್ರೀಶಾಂತ್ ಗೆ ವಿಧಿಸಿರುವ ಶಿಕ್ಷಣ ಪ್ರಮಾಣ ಮರು ಪರಿಶೀಲನೆ ನಡೆಸುವಂತೆ ಬಿಸಿಸಿಐಗೆ ಸುಪ್ರೀಂ ಆದೇಶ ನೀಡಿದೆ. 2013ರಲ್ಲಿ ಕೇರಳ ಕ್ರಿಕೆಟಿಗನ ಮೇಲೆ ಬಿಸಿಸಿಐ ಶಿಸ್ತು ಸಮಿತಿ ವಿಧಿಸಿರುವ ಆಜೀವ ನಿಷೇಧವನ್ನು ಉಚ್ಚ ನ್ಯಾಯಾಲಯ ಹಿಂದಕ್ಕೆ ಪಡೆದಿದೆ.

ಇನ್ನು ಮೂರು ತಿಂಗಳೊಳಗೆ ಶ್ರೀಶಾಂತ್ಗೆ ಶಿಕ್ಷೆಯ ಪ್ರಮಾಣದ ಬಗ್ಗೆ ಮರು ಪರಿಶೀಲನೆ ನಡೆಸಬೇಕೆಂದು ಬಿಸಿಸಿಐನ ಶಿಸ್ತುಸಮಿತಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ತನ್ನ ಆದೇಶ ಶ್ರೀಶಾಂತ್ ವಿರುದ್ಧ ಕ್ರಿಮಿನಲ್ ವ್ಯಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಶಿಕ್ಷೆಯ ಪ್ರಮಾಣ ನಿಗದಿಪಡಿಸಲು ಕೇರಳದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಮತ್ತೊಮ್ಮೆ ಬಿಸಿಸಿಐ ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಅವಕಾಶ ಪಡೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: