ಮೈಸೂರು

ಗಣರಾಜ್ಯೋತ್ಸವಕ್ಕೆ ಸಿದ್ಧಗೊಂಡಿದೆ ದೇಶಭಕ್ತಿಗೀತೆ : 60ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣ !

68ನೇ ಗಣರಾಜ್ಯೋತ್ಸವಕ್ಕೆ ಇದೀಗ ರಾಜ್ಯವ್ಯಾಪಿ ಸಿದ್ಧತೆಗಳು ನಡೆಯುತ್ತಿದೆ. ಅದರಂತೆ ಗಣರಾಜ್ಯೋತ್ಸವ ಅಂದಮೇಲೆ ಸ್ಪೆಷಲ್ ಆಗಿ ಏನಾದ್ರೂ ಮಾಡಿಲ್ಲ  ಅಂದರೆ ಹೇಗೆ ?  ಗಣರಾಜ್ಯೋತ್ಸವಕ್ಕಾಗಿಯೇ ಮೈಸೂರಿನ ಟೌನ್ ಬ್ರದರ್ಸ್ ಡ್ಯಾನ್ಸ್ ಕ್ಲಾಸ್ ಸಂಸ್ಥೆಯವರು ದೇಶಭಕ್ತಿ ಗೀತೆ ಕುರಿತಾದ ವಿಡಿಯೋವೊಂದನ್ನು ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಜನಸಾಮಾನ್ಯರ ಮೊಬೈಲ್’ನಲ್ಲಿ ಹರಿದಾಡುತ್ತಿದೆ. ಮಾತ್ರವಲ್ಲ ದೊಡ್ಡ ಮೊತ್ತದಲ್ಲಿ ಹಾಗೂ ದೊಡ್ಡ ವಿದ್ಯಾರ್ಥಿ ಬಳಗವನಿಟ್ಟುಕೊಂಡು ಈ ವಿಡಿಯೋ ಸಿದ್ಧಗೊಳಿಸಲಾಗಿದೆ.

ಟೌನ್ ಬ್ರದರ್ಸ್ ಮಾಡಿರುವ ಈ ವಿಡಿಯೋ ನೋಡೋದಕ್ಕೂ ಗೀತೆಯನ್ನು ಕೇಳೋದಕ್ಕೂ ತುಂಬಾನೇ ಚೆನ್ನಾಗಿದೆ. ಗೀತೆಯ ಆರಂಭದಲ್ಲೇ ರೈತರ ನಾಡಿದು, ಕಲೆಗಳ ತವರಿದು ಕಲ್ಪನ ಚಾವ್ಲಾ  ಜನಿಸಿದ ನಾಡಿದು ಎನ್ನುವ ಮೂಲಕ ದೇಶಕ್ಕಾಗಿ ದುಡಿದ, ಮಡಿದ ಗಣ್ಯರನ್ನು ಗೀತೆಯಲ್ಲಿ ಅಳವಡಿಸಿಕೊಂಡು ವಂದೇ ಮಾತರಂ ಎನ್ನುವ ಗೀತೆಯ ಸಾಲುಗಳನ್ನು ಇದರಲ್ಲಿ ಅಳವಡಿಸಿಕೊಂಡಿದ್ದಾರೆ. ವಿಡಿಯೋದಲ್ಲಿನ ಗೀತೆ ಇಷ್ಟು ಚೆನ್ನಾಗಿ ಮೂಡಿ ಬರಲು ಕಾರಣ ನರಸಿಂಹ ಮೂರ್ತಿ. ಅವರ ಗೀತ ರಚನೆಗೆ ವೈಶಾಖ್ ಶಶಿಧರ್ ಮತ್ತು ಮನುರಾವ್ ಸಂಗೀತ ನೀಡಿದ್ದಾರೆ. ವೈಶಾಖ್ ಅವರ ಕಂಠಸಿರಿಯಲ್ಲೇ ಗೀತೆ ಚೆನ್ನಾಗಿ ಮೂಡಿ ಬಂದಿದೆ. ರಕ್ಷಿತ್ ಅವರ ಛಾಯಾಗ್ರಹಣದಲ್ಲಿ ನೃತ್ಯ ಸಂಯೋಜನೆಯನ್ನು ಮೈಸೂರು ರಾಜು ಮಾಡಿದ್ದಾರೆ.

ಗೀತೆ ಚೆನ್ನಾಗಿ ಮೂಡಿ ಬರಲು ಹೆಲಿಕ್ಯಾಮ್ ಬಳಸಲಾಗಿದೆ. ಹೈ ವೀವ್ ಗಳನ್ನು ಸೆರೆ ಹಿಡಿಯಲು ಹೆಲಿಕ್ಯಾಮ್ ಗಳನ್ನು ಬಳಕೆ ಮಾಡಲಾಗಿದೆ. ಜೊತೆಯಲ್ಲಿ ಇದರ ನಿರ್ವಹಣೆಯನ್ನು ನಾಗೇಂದ್ರ ನೋಡಿಕೊಂಡಿದ್ದಾರೆ. ಜೊತೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾನ್ಸ್ ಕ್ಲಾಸ್’ನ ತರಬೇತಿಯ ಮಕ್ಕಳೂ, ಅವರ ಪೋಷಕರು ಹಾಗೂ ಇಟ್ಟಿಗೆ ಗೂಡಿನ ನಿವಾಸಿಗಳು ಈ ದೇಶ ಭಕ್ತಿ ಗೀತೆಗೆ ಸಾಥ್ ನೀಡಿದ್ದಾರೆ. ಸ್ನೇಹಮಯಿಯವರ ನಿರ್ಮಾಣದಲ್ಲಿ ಗೀತೆ ಅದ್ಭುತವಾಗಿ ಮೂಡಿ ಬಂದಿದೆ.

60 ರೂ. ವೆಚ್ಚದಲ್ಲಿ ಗೀತೆ ನಿರ್ಮಾಣ

ಬರೋಬ್ಬರಿ 60 ಸಾವಿರ ರೂ. ವೆಚ್ಚದಲ್ಲಿ ಈ ಗೀತೆಯನ್ನು ಸಿದ್ಧಪಡಿಸಲಾಗಿದೆ. ಇದು ನಮ್ಮ ನಾಡಿಗಾಗಿ, ನಮ್ಮ ದೇಶಕ್ಕಾಗಿ ಮಾಡಿರುವುದು ಅಂತಾರೆ  ಹಾಗೂ ಮೈಸೂರು ರಾಜು ಅವರು.

ಗಣರಾಜ್ಯೋತ್ಸವಕ್ಕೆ ಮೈಸೂರಿಗರಿಂದ ಹೊಸದೊಂದು  ದೇಶಭಕ್ತಿ ಗೀತೆ ರೆಡಿಯಾಗಿದ್ದು, ಮೋಡಿ ಮಾಡಿರುವುದಲ್ಲದೇ ಎಲ್ಲರ ನಾಲಿಗೆಯ ಮೇಲೆಯೂ  ನಲಿದಾಡಲಿದೆ.

– ಸುರೇಶ್ ಎನ್.

Leave a Reply

comments

Related Articles

error: