ಪ್ರಮುಖ ಸುದ್ದಿಮೈಸೂರು

ದಿ.17ರಂದು ಅಂಬರ ವೆಲ್ ನೆಸ್ ಉದ್ಘಾಟನೆ

ಮೈಸೂರು,ಮಾ.15 : ನಗರದ ಬೋಗಾದಿಯಲ್ಲಿ ನೂತನವಾಗಿ ‘ಅಂಬರ’ ವೆಲ್ ನೆಸ್ ಕೇಂದ್ರವು ಮಾ.17ರಿಂದ ಕಾರ್ಯಾರಂಭಗೊಳ್ಳುತ್ತಿದೆ ಎಂದು ಕೇಂದ್ರದ ನಿರ್ದೇಶಕಿ ಡಾ.ಅಥಿತಿ ಭಾರದ್ವಾಜ್ ತಿಳಿಸಿದರು.

ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಉದ್ಘಾಟನೆಯಲ್ಲಿ ಖ್ಯಾತ ವೈದ್ಯ, ಅಂಕಣಕಾರರಾದ ಡಾ.ವೆಂಕಟರಮಣ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿದ್ದು . ಮಧ್ಯಾಹ್ನ 3 ಗಂಟೆಯವರೆಗೂ ಹೊರ ರೋಗಿಗಳನ್ನು ಉಚಿತ ತಪಾಸಣೆ ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿಯೇ ಪ್ರಪ್ರಥಮವಾಗಿ ಕಾರ್ಯಾರಂಭಗೊಳ್ಳುತ್ತಿರುವ ಅಂಬರದಲ್ಲಿ ನ್ಯಾಚೂರೋಪತಿ, ಯೋಗ, ಅಕ್ಯೂಪ್ರೆಶರ್ ಹಾಗೂ ನ್ಯೂಟ್ರಿಷನ್ಸ್ ಚಿಕಿತ್ಸೆ ಸೇರಿದಂತೆ ಯೋಗ ತರಬೇತಿಯನ್ನು ನಡೆಸಲಾಗುವುದು. ಸಾಮಾನ್ಯ ಕಾಯಿಲೆಯಿಂದ ಕ್ಯಾನ್ಸರ್ ವರೆಗೂ ಉತ್ತಮ ಚಿಕಿತ್ಸೆಯು ಲಭ್ಯವಿರಲಿದೆ, ಅಲ್ಲದೇ ತಿಂಗಳಲ್ಲಿ ಎರಡು ದಿನಗಳು ಡಾ.ವೆಂಕಟರಮಣ ಹೆಗ್ಡೆಯವರು ಲಭ್ಯವಿರಲಿದ್ದಾರೆ ಎಂದು ಹೇಳಿದರು.

ಸಮಗ್ರ ಆರೋಗ್ಯಕ್ಕೆ ಪೂರಕವಾದ ಚಿಕಿತ್ಸೆಯು ಒಂದೇ ಸೂರಿನಡಿ ಲಭ್ಯವಿರಲಿದ್ದು, ನೊಂದಾಣಿಗಾಗಿ ದೂ.ಸಂ. 0821 4852385 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಡಾ.ಕುಶಾಲ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: