ಮೈಸೂರು

ಮೈಸೂರು ವಿವಿ ಘಟಿಕೋತ್ಸವ: ಸ್ನಾತಕೋತ್ತರ ಪದವಿಯಲ್ಲಿ 20 ಪದಕ, 5 ನಗದು ಬಹುಮಾನ ಪಡೆದ ಎಮಿಲೈಸ್ ಸ್ಟೆಲ್ಲಾ ಚಿನೆಲೊ

ಮೈಸೂರು,ಮಾ.15- ಮೈಸೂರು ವಿಶ್ವವಿದ್ಯಾನಿಲಯದ ತೊಂಬತ್ತೊಂಬತ್ತನೇ ವಾರ್ಷಿಕ ಘಟಿಕೋತ್ಸವವು ಮಾ. 17 ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ 28163 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು.

ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಎಮಿಲೈಸ್ ಸ್ಟೆಲ್ಲಾ ಚಿನೆಲೊ 20 ಪದಕ ಮತ್ತು 5 ನಗದು ಬಹುಮಾನ ಪಡೆದಿದ್ದಾರೆ.

ಎಮಿಲೈಸ್ ಸ್ಟೆಲ್ಲಾ ಚಿನೆಲೊ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಜಿಸಿಎಸ್ಐ ಚಿನ್ನದ ಪದಕ, ಆಲತೂರು ಕಾಳಮ್ಮ ಗೌಡಿಕೆ ಲಿಂಗೇಗೌಡ ದತ್ತಿ ಚಿನ್ನದ ಪದಕ, ಪ್ರೊ.ಸರ್ವೋತ್ತಮ ವೈ.ಅಮ್ಬೆಕಾರ್ ಚಿನ್ನದ ಪದಕ, ಪ್ರೊ.ಪಿ.ಜಿ.ರಾಮಪ್ಪ ದತ್ತಿ ಚಿನ್ನದ ಪದಕ, ಪ್ರೊ.ಬಿ.ಕೇಶವನ್ ದತ್ತಿ ಚಿನ್ನದ ಪದಕ, ಪ್ರೊ.ಡಿ.ಎಸ್.ಮಹದೇವಪ್ಪ ದತ್ತಿ ಚಿನ್ನದ ಪದಕ, ಪ್ರೊ.ಮುಕುಂದ ಕೃಷ್ಣನಾಯ್ಡು ಚಿನ್ನದ ಪದಕ, ಪ್ರೊ.ಜಿ.ಕೆ.ನಾರಾಯಣ ರೆಡ್ಡಿ ಚಿನ್ನದ ಪದಕ, ಪ್ರೊ.ಆರ್.ಶಾಕುಂತಲ ಚಿನ್ನದ ಪದಕ, ಕುಮಾರಿ ಕಾವ್ಯ ಖುಷಿ ಎಸ್. ಚಿನ್ನದ ಪದಕ, ಕಂಚುಗಾರ ಕೊಪ್ಪಲು ಶ್ರೀಮತಿ ಲೇಟ್ ಕೆಂಪಮ್ಮ ಸುಬ್ಬೇಗೌಡ ದತ್ತಿ ಚಿನ್ನದ ಪದಕ, ಸತ್ಯಭಾಮ ದೇವಿ ರಾಯ್ ದತ್ತಿ ಚಿನ್ನದ ಪದಕ, ಡಾ.ಎಸ್.ಶ್ರೀಕಾಂತ್ ಸ್ವಾಮಿ ದತ್ತಿ ಚಿನ್ನದ ಪದಕ, ಪೂರ್ಣ ಕೃಷ್ಣರಾವ್ ಪದಕ ಮತ್ತು ಪ್ರಶಸ್ತಿ, ದಿ ಶ್ರೀ ಲಕ್ಷ್ಮಮ್ಮ ಪದಕ, ಪ್ರೊ.ಕೆ.ಎಸ್.ರಂಗಪ್ಪ ಚಿನ್ನದ ಪದಕ, ಪ್ರೊ.ಸಣ್ಣಯ್ಯ ಆನಂದ್ ಚಿನ್ನದ ಪದಕ, ಪ್ರೊ.ಕೆ.ಬಸವಯ್ಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇನ್ನು ನಗದು ಪ್ರಶಸ್ತಿಯಲ್ಲಿ ಪ್ರೊ.ಹೆಚ್.ಸನೇಕ್ ಗೌಡ ಸನ್ಮಾನ ಸಮಿತಿ ದತ್ತಿ ನಗದು ಪ್ರಶಸ್ತಿ, ಪ್ರೊ.ಸಿ.ಅಂಜನಾ ಮೂರ್ತಿ ದತ್ತಿ ನಗದು ಪ್ರಶಸ್ತಿ, ಮರಾಬಾಹಳ್ಳಿ ಶ್ರೀಮತಿ ನಿಂಗಮ್ಮ ಮಾರದಪ್ಪ ಸ್ಮಾರಕ ನಗದು ಪ್ರಶಸ್ತಿ, ಪ್ರೊ.ಕೆ.ಬಸವಯ್ಯ ನಗದು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿರುವ ವಿದ್ಯಾರ್ಥಿಗಳ ವಿವರ ಇಂತಿವೆ: ಪದವಿಯ ಕಲಾ ವಿಭಾಗದಲ್ಲಿ ಎಂ.ರಂಜಿತಾ 2 ಪದಕ, 2 ನಗದು ಬಹುಮಾನ, ಸ್ಟೆಫಿ ಎಲಿಜೆಬತ್ ವರ್ಗೀಸ್ 3 ಪದಕ, 4 ನಗದು ಬಹುಮಾನ, ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಸುಷ್ಮಾ 2 ಪದಕ, 1 ನಗದು. ಎಸ್.ನಿಖಿಲ್ 2 ಪದಕ, 2 ನಗದು ಬಹುಮಾನ ಪಡೆದಿದ್ದಾರೆ. ರಂಜಿತ್ ಮತ್ತು ಬಿ.ಎಸ್.ಸುಷ್ಮಾ ಕ್ರಮವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದಾರೆ.

ಶಿಕ್ಷಣ ಪದವಿ ವಿಭಾಗದಲ್ಲಿ ಅಮರೇಗೌಡ 5 ಪದಕ, 1 ನಗದು ಬಹುಮಾನ, ಪಿ.ಮಹದೇವಸ್ವಾಮಿ 2 ಪದಕ, 2 ನಗದು ಬಹುಮಾನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಚ್.ಪಿ.ಸೌಮ್ಯ 2 ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಕಲಾ ವಿಭಾಗದಲ್ಲಿ ಪಿ.ಸಂಜನ ಡರ್ಲಾ (ಅರ್ಥಶಾಸ್ತ್ರ) 10 ಚಿನ್ನದ ಪದಕ, 3 ನಗದು ಬಹುಮಾನ, ಪಿ.ಎಲ್.ಪೂಜಿತಾ (ಕನ್ನಡ) 9 ಚಿನ್ನದ ಪದಕ, 4 ನಗದು ಬಹುಮಾನ, ರಬೀಹ್ ಅಜೀಜ್ ನಸ್ಸೆರ್ ಅಲ್ ಕ್ವಾಸ್ಮಿ (ಭಾಷಾವಿಜ್ಞಾನ) 6 ಚಿನ್ನದ ಪದಕ, 2 ನಗದು ಬಹುಮಾನ, ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎನ್. ನಿಖಿಲ್ (ಎಂಕಾಂ) 4 ಪದಕ, 2 ನಗದು ಬಹುಮಾನ, ರಬೀಹ್ ಅಜೀಜ್ ನಸ್ಸೆರ್ ಅಲ್ ಕ್ವಾಸ್ಮಿ ಮತ್ತು ಎಂ.ಎನ್. ನಿಖಿಲ್ ಹೆಚ್ಚು ಅಂಕಗಳಿಸಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಎಮಿಲೈಸ್ ಸ್ಟೆಲ್ಲಾ ಚಿನೆಲೊ 20 ಪದಕ ಮತ್ತು 5 ನಗದು ಬಹುಮಾನ ಪಡೆದರೆ, ಇದೇ ವಿಭಾಗದಲ್ಲಿ ಎನ್.ಶೋಭಾ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯಾಗಿದ್ದಾರೆ. ಶಿಕ್ಷಣ ವಿಭಾಗದಲ್ಲಿ ಅಬ್ಡಿರಿಜಾಕ್ ಅಸ್ಸನ್ ಇಬ್ರಾಹಿಂ ಹೆಚ್ಚು ಅಂಕದೊಡನೆ 4 ಪದಕ, 2 ನಗದು ಬಹುಮಾನ, ಎಂ.ಆರ್.ಪ್ರದೀಪ್‍ಕುಮಾರ್ 5 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಪಡೆದಿದ್ದಾರೆ. ಕಾನೂನು ವಿಭಾಗದಲ್ಲಿ ವಿಶ್ವಾಸ್ ಪುಟ್ಟಸ್ವಾಮಿ 2 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಪಡೆದಿದ್ದಾರೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: