ಮೈಸೂರು

ಕ್ವಾಜಾ ಗರೀಬುನ್ ನವಾಜ್ ಮತ್ತು ಮೆಹಫಿಲ್-ಇ-ಸಮಾ (ಖವ್ವಾಲಿ) ಕಾರ್ಯಕ್ರಮ

ಮೈಸೂರು,ಮಾ.15:- ಗೌಸಿಯಾನಗರದಲ್ಲಿ ಅತ್ತಾ-ಇ-ರಸೂಲ್ ಮೂವ್‍ಮೆಂಟ್, ಮೈಸೂರು ಮತ್ತು ಕ್ವಾಜಾ ಸೂಫಿ ಅಜೀಮ್ ಆಲಿ ಷಾ ಚಿಸ್ಟಿ ಸೂಫಿ ಸಮಿತಿ, ಮೈಸೂರು & ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ  ದಾರುಲ್ ಉಲೂಮ್ ಹಜರತ್ ಟಿಪ್ಪು ಸುಲ್ತಾನ್ ಫೈಜಾನ್ ಗರೀಬುನ್ ನವಾಜ್, ನಂ.203, ಆಸ್ತಾನ್-ಇ-ಕ್ವಾಜಾ, 10ನೇ ಕ್ರಾಸ್, ಚೆಸ್ಕಾಂ ಟ್ರಾನ್ಸ್‍ಫಾರ್ಮರ್ ಸ್ಟ್ರೀಟ್, ಎ-ಬ್ಲಾಕ್, ಗೌಸಿಯಾ ನಗರ, ಮೈಸೂರು ಇಲ್ಲಿ ಕ್ವಾಜಾ ಕಿ ಚಟಿ ಷರೀಫ್, ಹಜರತ್ ಕ್ವಾಜಾ ಗರೀಬುನ್ ನವಾಜ್ ದರ್ಗಾ, ಅಜ್ಮೀರ್ ಷರೀಫ್, ರಾಜಾಸ್ತಾನ್ ರವರ 807ನೇ ವಾರ್ಷಿಕ ಗಂಧದ ಉರುಸ್ ಅನ್ನು ಕ್ವಾಜಾ ಸೂಫಿ ಅಜೀಮ್ ಅಲಿ ಷಾ ಚಿಸ್ಟಿ ರವರ ಮೇಲ್ವಿಚಾರಣೆಯಲ್ಲಿ ಮತ್ತು ಹಜರತ್ ಕ್ವಾಜಾ ಬಲ್‍ಹಾರ್ ಅಲಿ ಷಾ ಚಿಸ್ಟಿ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಭಂತೆ ಕಲ್ಯಾಣಸಿರಿ, ವಿಶ್ವ ಮೈತ್ರಿ ಬುದ್ಧ ವಿಹಾರ, ಮೈಸೂರು;  ಶ್ರೀ ಬಸವಲಿಂಗ ಮೂರ್ತಿ ಶರಣರು, ಬಸವ ಧ್ಯಾನ ಮಂದಿರ, ಟಿಪ್ಪು ಟೌನ್,   ಹಜರತ್ ಮೌಲಾನಾ ಮುಫ್ತಿ ಮುಸ್ತಾಕ್ ಅಹಮದ್ ಮಕ್ಬೂಲಿ ಸಾಹೆಬ್, ಖತೀಬ್ ದರ್ಗಾಹಿ ಮಸೀದಿ, ಸಾಡೇ ರಸ್ತೆ  , ಡಾ. ಪುಟ್ಟಸಿದ್ದಯ್ಯ, ಉದಯಗಿರಿ, ಹಜರತ್ ಮೌಲಾನಾ ಸೈಯದ್ ಹಯಾತ್ ಷಾ ಜಲಾಲ್ ಹಫೀಜ್ ಖಾದ್ರಿ, ಮೌಲಾನಾ ಮಕ್ಬೂಲ್ ಅಹಮದ್ ನಿಜಾಮಿ   ಹಜರತ್ ಕ್ವಾಜಾ ಗರೀಬುನ್ ನವಾಜ್ ರವರ ಜೀವನ ಚರಿತ್ರೆಯ ಬಗ್ಗೆ ಭಾಷಣ ಮಾಡಿದರು. ಅಲ್ ಕುಲ್ಫಾ ದರ್ವೇಶ್ ವೆಲ್‍ಫೇರ್ ಆರ್ಗನೈಜೇಷನ್, ಮೈಸೂರು, ಉಲ್ಮಾಗಳು, ಅಹಲೆ ಸುನ್ನತೋ & ಮುಷಾಹಿನ್, ಮೆಹಬೂಬ್ ಅಲಿ ಷಾ ಚಿಸ್ಟಿ, ಅಜೀಮುಲ್ಲಾ ಷಾ, ಮೈಸೂರು ಮಂಡಲ್, ಮೊಹಮ್ಮದ್ ರೂಹ್‍ಉಲ್ಲಾ ಸತ್ತಾರಿ, ನವೀದ್ ಷಾ ಖಾದ್ರಿ, ಕ್ವಾಜಾ ಮೊಯೀನ್ ಅಲಿ ಷಾ ಮತ್ತು ಇತರೆ ಗಣ್ಯರು  ಭಾಗವಹಿಸಿದ್ದರು.

ಪ್ರತಿ ವರ್ಷದಂತೆ ಇದೇ ದಿನ ಕ್ವಾಜಾ ಮೊಯೀನ್ ಅಲಿ ಷಾ ಚಿಸ್ಟಿ ಮಂಗಳೂರು ಕ್ವಾಜಾ ಅತ್ತಾ ಆಲಿಷಾ ಚಿಸ್ಟಿ ಬನಾವಾ, ಬೆಂಗಳೂರು, ಮೊಹಮ್ಮದ್ ಇನ್ ಜಾಮ್ ಚಿಸ್ಟಿ ಕ್ವಾಜಾ ಮೌದ್ ಆಲಿ ಷಾ ಚಿಸ್ಟಿ, ಬನಾವಾ, ಮೈಸೂರು ರವರ ಮೇಲ್ವಿಚಾರಣೆಯಲ್ಲಿ   ಪಜರ್ ಪ್ರಾರ್ಥನೆಯ ನಂತರ ಬೆಳಿಗ್ಗೆ 6.30 ಕ್ಕೆ ಖುರಾನ್ ಪಠಣೆ, ಆಲಮ್ ಕುಶಾಲಿ 11 ಗಂಟೆಗೆ, ಕ್ವಾಜಾ ಗರೀಬುನ್ ನವಾಜ್ ಸಮ್ಮೇಳನ 1 ಗಂಟೆಗೆ, ಸಂಜೆ 7 ಗಂಟೆಗೆ ಫತಾಖಾನಿ ನಡೆಯಿತು. ರಾತ್ರಿ 9.30 ಕ್ಕೆ ಮೆಹಫಿಲ್ ಸಮಾಖಾನಿ (ಖವ್ವಾಲಿ) ಕಾರ್ಯಕ್ರಮವನ್ನು ಖವ್ವಾಲ್   ಜಹೀರ್ ಚಿಸ್ಟಿ & ಗ್ರೂಪ್, ಆಂಧ್ರ ಪ್ರದೇಶ   ನಡೆಸಿಕೊಟ್ಟರು. ಹಜರತ್ ಕ್ವಾಜಾ ಸೂಫಿ ಅಜೀಮ್ ಅಲಿ ಚಿಸ್ಟಿ ಸಾಹೇಬ್‍   ಸ್ವಾಮೀಜಿಗಳಿಗೆ ಮತ್ತು ಅತಿಥಿಗಳಿಗೆ ಹೂವಿನಹಾರ ಹಾಕಿ, ನೆನಪಿನ ಕಾಣಿಕೆಯನ್ನು ನೀಡಿದರು. (ಎಸ್.ಎಚ್)

Leave a Reply

comments

Related Articles

error: