ದೇಶಪ್ರಮುಖ ಸುದ್ದಿ

ವಿವಿ ಪ್ಯಾಟ್ ಸ್ಲಿಪ್ ಎಣಿಕೆಗೆ ವಿಪಕ್ಷ ನಾಯಕರ ಆಗ್ರಹ: ಮಾ.25ರಂದು ಸುಪ್ರೀಂ ವಿಚಾರಣೆ

ಹೊಸದಿಲ್ಲಿ (ಮಾ.15): ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟಿಸುವ ಮುನ್ನ ಪ್ರತಿಯೊಂದು ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳ ಶೇ.50ರಷ್ಟು ವಿಪಿಪ್ಯಾಟ್‌ ಅಂದರೆ ವೋಟರ್ ವೆರಿಫಯಬಲ್ ಪೇಪರ್ ಆಡಿಟ್ ಟ್ರಯಲ್ ಸ್ಲಿಪ್‍ಗಳ ಎಣಿಕೆಯನ್ನು ಮಾಡುವಂತೆ ವಿರೋಧ ಪಕ್ಷಗಳ ನಾಯಕರ ಕೋರಿಕೆಗೆ ಸಂಬಂಧಿಸಿ ಉತ್ತರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ಚುನಾವಣಾ ಆಯೋಗಕ್ಕೆ ನೊಟೀಸ್‌ ಜಾರಿ ಮಾಡಿದೆ.

ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ಜಸ್ಟಿಸ್‌ ದೀಪಕ್‌ ಗುಪ್ತಾ ಹಾಗೂ ಜಸ್ಟಿಸ್‌ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠವು ವಿಪಕ್ಷ ನಾಯಕರ ಮನವಿಯ ವಿಚಾರಣೆಯನ್ನು ಮಾರ್ಚ್‌ 25ಕ್ಕೆ ನಿಗದಿಸಿದೆ. ಈ ವಿಷಯದಲ್ಲಿ ಕೋರ್ಟಿಗೆ ನೆರವಾಗುವುದಕ್ಕಾಗಿ ಓರ್ವ ಅಧಿಕಾರಿಯನ್ನು ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಹಲವಾರು ವಿಪಕ್ಷ ನಾಯಕರು ವಿವಿಪ್ಯಾಟ್‌ ಸ್ಲಿಪ್‍ಗಳ ಎಣಿಕೆಗೆ ಆಗ್ರಹಿಸಿ ಸುಪ್ರೀಮ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: