ಮೈಸೂರು

ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನಾಚರಣೆ : ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆ; ಸನ್ಮಾನ

ಮೈಸೂರು,ಮಾ.15:- ವಿಪ್ರ ಸಹಾಯವಾಣಿ ಮತ್ತು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಮೈಸೂರು ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನಾಚರಣೆಯನ್ನು ಇಂದು ವಿದ್ಯಾರಣ್ಯಪುರಂನಲ್ಲಿರುವ ಅವನೀ ಶಂಕರಮಠದಲ್ಲಿ ಏರ್ಪಡಿಸಲಾಗಿತ್ತು.

ದಿನ ನಿತ್ಯದ ಬಳಕೆಯಲ್ಲಿರುವ ಅಗತ್ಯವಸ್ತುಗಳ ಕುರಿತು ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.  ಅಡುಗೆ ಅನಿಲದ ಸುರಕ್ಷತೆ ಮತ್ತು ಸದ್ಬಳಕೆಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ವೇಣುಗೋಪಾಲ್   ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಂತರ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ಕೆ.ರಘುರಾಂ ವಾಜಪೇಯಿ  ಗ್ರಾಹಕರು ಪ್ರಜ್ಞಾವಂತ ರಾದರೆ ಮಾತ್ರ ಗ್ರಾಹಕ  ಸಮುದಾಯದಲ್ಲಿ ಏಳಿಗೆ ಸಾಧ್ಯವಿದೆ.  ಯಾವುದೇ ಸರಕುಗಳನ್ನು ಖರೀದಿಸುವ ಮುನ್ನ ಅದರ ಸಂಪೂರ್ಣ ಮಾಹಿತಿ ಪಡೆಯಬೇಕು ಮತ್ತು ಜಾಹೀರಾತಿಗೆ ಮರುಳಾಗಿ ಅನಗತ್ಯ ವಸ್ತುಗಳ ಖರೀದಿ ತಪ್ಪಿಸಬೇಕು. ಯಾವುದೇ ಮೋಸದ ವಿರುದ್ಧ ಗ್ರಾಹಕ ಪಂಚಾಯತ್ ಕೇಂದ್ರ ದ ಸಹಾಯದಿಂದ ಕೇಸು ದಾಖಲಿಸಬಹುದು ಎಂದರು.

ಗ್ರಾಹಕ ಪಂಚಾಯತ್ ನ ಉಪಾಧ್ಯಕ್ಷ ಹಾಗೂ ಆರ್.ಟಿ.ಐ ಕಾರ್ಯಕರ್ತರಾದ ಜಿ.ಆರ್.ವಿದ್ಯಾರಣ್ಯ ಮಾತನಾಡಿ ಈ ವರ್ಷದ ವಿಷಯ ವಸ್ತುವಾದ ನಂಬಿಕೆಗೆ ಅರ್ಹವಾದ ಸ್ಮಾರ್ಟ್ ಉಪಕರಣಗಳು ಮತ್ತು ಗ್ರಾಹಕರು ಹೇಗೆ ಪೆದ್ದರಾಗುವ ಸಾಧ್ಯತೆ ಇದೆ ಎಂಬುದನ್ನು ವಿವರಿಸಿ ಗ್ರಾಹಕರು ಜಾಗರೂಕರಾಗಬೇಕು ಎಂಬುದನ್ನು ತಿಳಿಸಿದರು.

ಡಿಟಿ.ಪ್ರಕಾಶ್ ಮಾತನಾಡಿ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತರೆ ಇಡೀ ಸಮಾಜವೇ ಅರಿತಂತೆ ಆದ್ದರಿಂದ ನೀವು ಖರೀದಿಸುವ ಉತ್ಪನ್ನಗಳ  ಮಾಹಿತಿಗಳನ್ನು ಇಂಟರ್ನೆಟ್ ಮೂಲಕ ತಿಳಿಯಿರಿ ಎಂದು ಸಲಹೆ ನೀಡಿ ಗ್ರಾಹಕರ ಹಕ್ಕುಗಳ ಕುರಿತು ಕರಪತ್ರ ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಗ್ರಾಹಕರ ಮಾಹಿತಿ ಕೇಂದ್ರದ  ನಾಗರತ್ನಮೂರ್ತಿ,ಮಾಜಿ ನಗರಪಾಲಿಕೆ ಸದಸ್ಯರಾದ ಸೌಭಾಗ್ಯಮೂರ್ತಿ ಮತ್ತು  ವಕೀಲರಾದ   ವೀಣಾ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸುಂದರೇಶನ್, ಭವಾನೀಶಂಕರ್, ಜಿ.ಆರ್.ವಿದ್ಯಾರಣ್ಯ, ಜೆ.ರಮೇಶ್,ರಂಗನಾಥ್, ಜಯಸಿಂಹ,ಸುಚೀಂದ್ರ,ತೇಜಸ್ ಶಂಕರ್,ಪ್ರಶಾಂತ್ ಭಾರದ್ವಾಜ್,ರಾಧಾ,ಲತಾ ಬಾಲಕೃಷ್ಣ, ಮುಂತಾದವರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: