ಮನರಂಜನೆ

ಖ್ಯಾತ ಬ್ಯಾಡ್ ಮಿಂಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್ ನಲ್ಲಿ ನಟಿ ಶ್ರದ್ಧಾ ಕಪೂರ್ ಬದಲು ನಟಿ ಪರಿಣಿತಿ ಚೋಪ್ರಾ !

ದೇಶ(ನವದೆಹಲಿ)ಮಾ.15:- ಖ್ಯಾತ ಬ್ಯಾಡ್ ಮಿಂಟನ್ ತಾರೆ ಸೈನಾ ನೆಹ್ವಾಲ್ ಬಯೋಪಿಕ್ ನಲ್ಲಿ ನಟಿ ಶ್ರದ್ಧಾ ಕಪೂರ್ ಬದಲು ನಟಿ ಪರಿಣಿತಿ ಚೋಪ್ರಾ ಅಭಿನಯಿಸಲಿದ್ದಾರೆ.

ಚಿತ್ರದಿಂದ ಶ್ರಧ್ಧಾ ಅವರನ್ನು ತೆಗೆಯುವುದಕ್ಕೆ ಕಾರಣವೂ ತಿಳಿದುಬಂದಿದೆ. ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಮಾಧ್ಯಮವೊಂದರ ಜೊತೆ ಮಾತನಾಡಿ ಅವರು ಈ ಚಿತ್ರವನ್ನು ಇದೇ ವರ್ಷ ಪೂರ್ಣಗೊಳಿಸಲು ಇಚ್ಛಿಸಿದ್ದಾಗಿ ತಿಳಿಸಿದ್ದು, ನಾವು ಸೈನಾ ಬಯೋಪಿಕ್ ನ್ನು ಇದೇ ವರ್ಷದ ಕೊನೆಯಲ್ಲಿ ಮುಗಿಸಲು ತೀರ್ಮಾನಿಸಿದ್ದು, 2020ರ ಆರಂಭದಲ್ಲಿಯೇ ಬಿಡುಗಡೆಗೊಳಿಸಬೇಕೆಂದು ನಿರ್ಧರಿಸಿದ್ದೇವೆ. ಶ್ರದ್ಧಾ ಚಿತ್ರ ತೊರೆಯುವ ನಿರ್ಧಾರವನ್ನು ತಂಡದೊಂದಿಗೆ ಮಾತನಾಡಿ ತಿಳಿಸಿದ್ದರು. ಶ್ರದ್ಧಾ ನಂತರ ನಟಿ ಪರಿಣಿತಿ ಚೋಪ್ರಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾವು ಖುಷಿಯಾಗಿದ್ದೇವೆ.ಸೈನಾ ವಿಶ್ವದಲ್ಲಿಯೇ ಭಾರತಕ್ಕೆ ಒಂದು ಹೊಸಪರಿಚಯವನ್ನು ಕೊಟ್ಟವರು. ನಾವು ಅವರ ಕಥೆಯನ್ನು ಜಗತ್ತಿನೆದುರು ತರಬಯಸುತ್ತೇವೆ’ ಎಂದಿದ್ದಾರೆ.

ಈ ಚಿತ್ರವನ್ನು ಒಪ್ಪಿಕೊಂಡ ನಂತರ ಪರಿಣಿತಿ ಚೀಪ್ರಾ ಕೂಡ ಉತ್ಸುಕರಾಗಿದ್ದಾರೆ. ಕ್ರೀಡೆ ನನ್ನ ವ್ಯಕ್ತಿತ್ವದ ಒಂದು ಭಾಗ. ಆದರೆ ನಾನು ನಡಿಯಾಗಿ ನಾನು ಇದುವರೆಗೂ ಇಂತಹ ಚಿತ್ರದಲ್ಲಿ ನಟಿಸಿರಲಿಲ್ಲ. ನಾನು ತುಂಬಾ ಖುಷಿಯಾಗಿದ್ದೇನೆ. ಯಾಕೆಂದರೆ ಅಂತಹ ಸ್ಟ್ರಾಂಗ್ ಹುಡುಗಿಯ ಪಾತ್ರವನ್ನು ಪರದೆಯ ಮೇಲೆ ಅಭಿನಯಿಸುವ ಅವಕಾಶ ನನಗೆ ಲಭಿಸಿದೆ. ನನಗೆ ಗೊತ್ತು. ಇದಕ್ಕಾಗಿ ನಾನು ತುಂಬಾ ಪರಿಶ್ರಮ ಪಡಬೇಕು. ಆದರೆ ಇದಕ್ಕೆ ನಾನು ಸಿದ್ಧಳಿದ್ದೇನೆ ಎಂದಿದ್ದಾರೆ.

ಶ್ರದ್ಧಾ ಕಪೂರ್ ಕೂಡ ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಫಸ್ಟ್ ಲುಕ್ ಕೂಡ ರಿಲೀಸ್ ಆಗಿತ್ತು. ಅದನ್ನು ನೋಡಿದ ಸೈನಾ ಚಿತ್ರದ ಕುರಿತು ತಾನು ಸಾಕಷ್ಟು ಉತ್ಸುಕನಾಗಿದ್ದು, ಚಿತ್ರ ಉತ್ತಮವಾಗಿ ಮೂಡಿಬರಲಿದೆ ಎಂದಿದ್ದರು. (ಎಸ್.ಎಚ್)

Leave a Reply

comments

Related Articles

error: