ಕರ್ನಾಟಕ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೇ ದೊಡ್ಡ ಹಬ್ಬ: ಹಾಸನ ಡಿ.ಸಿ ಅಕ್ರಂ ಪಾಷ

ಹಾಸನ (ಮಾ.15): ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬ ಪತ್ರಿಯೊಬ್ಬ ಮತದಾರರು ಇದರಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳುವ ಮೂಲಕ ಇದನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ.

ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಶಾಹಿ ಗಾರ್ಮೆಂಟ್ಸ್‍ನಲ್ಲಿ ಇಂದು ಜಿಲ್ಲಾಡಳಿತ, ಸ್ಪೀಪ್ ಸಮಿತಿ ಹಾಗೂ ಕಾರ್ಮಿಕ ಇಲಾಖಾ ವತಿಯಿಂದ ಇಂದು ಶುಕ್ರವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಚಟುವಟಿಕೆ ಹಾಗೂ ವಿದ್ಯುನ್ಮಾ ಮತಯಂತ್ರಗಳ ಬಳಕೆ ಪ್ರಾತೆಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಪ್ರತಿಯೊಬ್ಬರ ಸಂಪೂರ್ಣ ಸಹಭಾಗಿತ್ವ ಸಂಪೂರ್ಣ ಅಗತ್ಯ ಎಂಬುದು ಚುನಾವಣಾ ಆಯೋಗದ ಆಶಯ. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ಏ. 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಇರುವ 18 ವರ್ಷ ತುಂಬಿರುವರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಎಲ್ಲರೂ ನೈತಿಕ ಮತದಾನದ ಮಹತ್ವ ಅರಿಯಬೇಕು ಹಾಗೂ ಇತರರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಸ್ಪೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ಕಾರ್ಮಿಕರಿಗೆ ಮತದಾರರ ಪ್ರತಿಜ್ಞಾನವಿಧಿ ಬೋದಿಸಿದರು. ಎಲ್ಲರಿಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅ ಶಿಂದಿಹಟ್ಟಿ, ಜಿಲ್ಲಾ ಸ್ಪೀಪ್ ಸಮಿತಿ ಸದಸ್ಯಕಾರ್ಯದರ್ಶಿ ವಿನೋದ್ ಚಂದ್ರ, ತೋಟಗಾರಿಕ ಇಲಾಖಾ ಹಿರಿಯ ಸಹಾಯ ನಿರ್ದೇಶಕರಾದ ರವಿಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಬಾಲಕೃಷ್ಣ, ಮಾಸ್ಟರ್ ಟ್ರೈನರ್ ಉಬೇದುಲ್ಲಾ, ಶಾಹೀ ಏಕ್ಸ್‍ಪೋಟ್ರ್ಸ್‍ನ ಮುಖ್ಯಸ್ಥರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: