
ಕರ್ನಾಟಕ
ಗೋಕುಲ್ದಾಸ್ ಕಾರ್ಖಾನೆಯಲ್ಲಿ ಮತದಾರರ ಜಾಗೃತಿ
ಹಾಸನ (ಮಾ.15): ಜಿಲ್ಲಾಡಳಿತ ಮತ್ತು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ನಗರದ ಗೋಕುಲ್ದಾಸ್ ಕಾರ್ಖಾನೆಯಲ್ಲಿ ಮತದಾರರ ಜಾಗೃತಿ ಚಟುವಟಿಕೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಅವರು ಮಾತನಾಡಿ ಏ.18 ರಂದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ 18 ವರ್ಷ ತುಂಬಿದ ಅರ್ಹರು ನಮೂನೆ 6ರಲ್ಲಿ ಅರ್ಜಿ ಭರ್ತಿ ಮಾಡಿ ನೊಂದಾಯಿಸಿಕೊಳ್ಳಬೇಕು ಎಂದರು.
ವಿದ್ಯುನ್ಮಾ ಮತಯಂತ್ರಗಳ ಬಳಕೆ ಸ್ವರೂಪ ವಿವಿಪ್ಯಾಟ್ನಲ್ಲಿ ಮತ ಖಾತರಿ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಅವರು ವಿವರಿಸಿದರು.
ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅ ಶಿಂದಿಹಟ್ಟಿ, ಜಿಲ್ಲಾ ಸ್ಪೀಪ್ ಸಮಿತಿ ಸದಸ್ಯಕಾರ್ಯದರ್ಶಿ ವಿನೋದ್ ಚಂದ್ರ, ತೋಟಗಾರಿಕ ಇಲಾಖಾ ಹಿರಿಯ ಸಹಾಯ ನಿರ್ದೇಶಕರಾದ ರವಿಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಬಾಲಕೃಷ್ಣ, ಮಾಸ್ಟರ್ ಟ್ರೈನರ್ ಉಬೇದುಲ್ಲಾ, ಗೋಕುಲ್ದಾಸ್ ಕಾರ್ಖಾನೆ ವ್ಯವಸ್ಥಾಪಕರಾದ ಆನಂತ್ ರಾಜು ಮತ್ತು ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಇಚ್ಚಾ ಹೆಗ್ಗಡೆ ಮತ್ತಿತರರು ಹಾಜರಿದ್ದರು. ಇದೇ ವೇಳೆ ಮತಾರರ ಜಾಗೃತಿ ಪತ್ರಿ ಅಭಿಯಾನ ಹಾಗೂ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. (ಎನ್.ಬಿ)