ಸುದ್ದಿ ಸಂಕ್ಷಿಪ್ತ

ಮಾ.18ರಿಂದ ಕಮ್ಮಟ

ಮೈಸೂರು,ಮಾ.15 : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಕನ್ನಡ ಮಹಾಕಾವ್ಯಗಳು ಲಿಖಿತ ಮತ್ತು ಮೌಖಿಕ ಪರಂಪರೆಯ ತೌಲನಿಕ ಅಧ್ಯಯನ ವಿಷಯವಾಗಿ 5 ದಿನಗಳ ಕಮ್ಮಟವನ್ನು ಮಾನಸಗಂಗೋತ್ರಿಯ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮಾ.18 ರಿಂದ 22ರವರೆಗೆ ನಡೆಯುವ ಕಮ್ಮಟವನ್ನು ಮಾ.18ರ ಬೆಳಗ್ಗೆ 10 ಗಂಟೆಗೆ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಉದ್ಘಾಟಿಸುವರು.

ವಿಭಾಗದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಭಾಷಾ ಸಂಸ್ಥಾನ ಉಪನಿರ್ದೇಶಕ ಪ್ರೊ.ಪಿ.ಆರ್.ಡಿ.ಫರ್ನಾಂಡಿಸ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕಿ ಪ್ರೊ.ಕೆ.ಆರ್.ದುರ್ಗಾದಾಸ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: