ಸುದ್ದಿ ಸಂಕ್ಷಿಪ್ತ

ಮಾ.17ರಂದು ಪುಸ್ತಕ ಬಿಡುಗಡೆ-ಉಪನ್ಯಾಸ

ಮೈಸೂರು,ಮಾ.15 : ಕ್ರಿಯಾ –ನವಕರ್ನಾಟಕ ಜಂಟಿ ಯೋಜನೆ ಮಾರ್ಕ್ಸ್ 200 ಕ್ಯಾಪಿಟಲ್ 150 ಮಾಲಿಕೆ ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸವನ್ನು ಮಾ.17ರ ಬೆಳಗ್ಗೆ 10.30ಕ್ಕೆ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಅಖಿಲ ಭಾರತ ಜನ ವಿಜ್ಞಾನ ಜಾಲ ಅಧ್ಯಕ್ಷ ಪ್ರೊ.ಸವ್ಯಸಾಚಿ ಚಟರ್ಜಿ ಪುಸ್ತಕ ಬಿಡುಗಡೆಗೊಳಿಸುವರು.  ಪ್ರೊ.ಕೆ.ಪಿ.ವಾಸುದೇವನ್ ಪುಸ್ತಕ ಕುರಿತು ಮಾತನಾಡುವರು. ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ, ಡಾ.ಜಿ.ರಾಮಕೃಷ್ಣ ಇನ್ನಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: