ಮೈಸೂರು

ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ : 4ಲಕ್ಷರೂ.ಮೌಲ್ಯದ ದ್ವಿಚಕ್ರವಾಹನ ವಶ

ಮೈಸೂರು,ಮಾ.16:- ಮೈಸೂರು ನಗರದ  ದ್ವಿಚಕ್ರವಾಹನ ಕಳವು ಪ್ರಕರಣಗಳ ಪತ್ತೆ ಸಂಬಂಧ  ಮೈಸೂರು ನಗರದ ಪೊಲೀಸ್ ಆಯುಕ್ತ  ಕೆ.ಟಿ. ಬಾಲಕೃಷ್ಣ ಅವರು ನಗರದ ಡಿ.ಸಿ.ಪಿ.  ಮುತ್ತುರಾಜು ಎಂ ಅವರ ನೇತೃತ್ವದಲ್ಲಿ  ಸಿ.ಸಿ.ಬಿ.ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು   ಪದ್ಮ ಟಾಕೀಸ್ ಬಳಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯೋರ್ವನನ್ನು ಬಂಧಿಸಿದೆ.

ಬಂಧಿತನನ್ನು ಮಧುಕುಮಾರ್ @ ಬಾಂಡ್ ಬಿನ್  ಮಹದೇವಸ್ವಾಮಿ, (21 ವರ್ಷ) ರಾಮನುಜರಸ್ತೆ, ಅಗ್ರಹಾರ, ಕೆ.ಆರ್.ಮೊಹಲ್ಲಾ ಮೈಸೂರು ನಗರ ಎಂದು ಗುರುತಿಸಲಾಗಿದೆ. ಈತನನ್ನು ದಸ್ತಗಿರಿ ಮಾಡಿ, ವಿಚಾರ ಮಾಡಲಾಗಿ ಈತ  ಮೈಸೂರು ನಗರದ ವಿದ್ಯಾರಣ್ಯಪುರಂ, ಕುವೆಂಪುನಗರ ಮತ್ತು ಸರಸ್ವತಿಪುರಂ ಠಾಣಾ ವ್ಯಾಪ್ತಿಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಸರಸ್ವತಿಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್‍ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ   4,00,000ರೂ. ಮೌಲ್ಯದ 04 ದ್ವಿ ಚಕ್ರ ವಾಹನಗಳು, ಒಂದು ಲ್ಯಾಪ್‍ಟಾಪ್ ಮತ್ತು 02 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಈ ಪತ್ತೆ ಕಾರ್ಯದಿಂದ ವಿದ್ಯಾರಣ್ಯಪುರಂ ಠಾಣೆಯ -1, ಕುವೆಂಪುನಗರ ಠಾಣೆಯ -1, ಸರಸ್ವತಿಪುರಂ ಠಾಣೆಯ -03 ಪ್ರಕರಣಗಳು ಪತ್ತೆಯಾಗಿವೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.   ಮುತ್ತುರಾಜು.ಎಂ. ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ.  ಮರಿಯಪ್ಪ.ವಿ.  ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್ ಸಿ.ಕಿರಣ್‍ಕುಮಾರ್, ಸಿಬ್ಬಂದಿಗಳಾದ ಎ.ಎಸ್.ಐ.  ಚಂದ್ರೇಗೌಡ,   ಸಿಬ್ಬಂದಿಗಳಾದ ಚಿಕ್ಕಣ್ಣ.ಸಿ.,  ರಾಮಸ್ವಾಮಿ,  ಗಣೇಶ್.ಎಂ.ಆರ್.,   ಅಸ್ಗರ್ ಖಾನ್,  ಶಿವರಾಜು,  ರಾಜೇಂದ್ರ,   ನಿರಂಜನ್,  ಚಂದ್ರಶೇಖರ್,  ಚಾಮುಂಡಮ್ಮ, ಗೌತಮ್,   ಶಿವಕುಮಾರ್  ಮಾಡಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: