
ಪ್ರಮುಖ ಸುದ್ದಿ
ಲೋಕಸಭಾ ಚುನಾವಣೆಗೂ ಮುನ್ನವೇ ಒಡಿಶಾದಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆ : ಶಾಸಕ ಪ್ರಕಾಶ್ ಚಂದ್ರ ಬೆಹ್ರಾ ರಾಜೀನಾಮೆ
ದೇಶ(ನವದೆಹಲಿ)ಮಾ.16:- ಲೋಕಸಭಾ ಚುನಾವಣೆಗೂ ಮುನ್ನವೇ ಒಡಿಶಾ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ. ಕಟಕ್ ಜಿಲ್ಲೆಯ ಸಾಲೇಪುರ್ ಶಾಸಕ ಪ್ರಕಾಶ್ ಚಂದ್ರ ಬೆಹ್ರಾ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದ ಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.
ಆದರೆ ಅವರು ಮತ್ತೆ ಯಾವ ಪಕ್ಷವನ್ನು ಸೇರಲಿದ್ದಾರೆಂಬ ಮಾಹಿತಿ ಮಾತ್ರ ಇದುವರೆಗೂ ಲಭ್ಯವಾಗಿಲ್ಲ.ನವೀನ್ ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರ ಅಧಿಕಾರದಲ್ಲಿದ್ದು, ಲೋಕಸಭೆಯಲ್ಲಿ 21 ಮತ್ತು ವಿಧಾನಸಭೆಯಲ್ಲಿ 147ಸೀಟುಗಳಿವೆ. ಒಡಿಶಾದಲ್ಲಿ ಚುನಾವಣೆಯು ನಾಲ್ಕು ಹಂತದಲ್ಲಿ ಏಪ್ರೀಲ್ 11ರಿಂದ ಮೇ.19ರವರೆಗೆ ನಡೆಯಲಿದೆ. ಮೇ.23ಕ್ಕೆ ಫಲಿತಾಂಶ ಹೊರಬರಲಿದೆ. ಒಡಿಶಾದಲ್ಲಿ ಏ.11,18,23,29ಕ್ಕೆ ಚುನಾವಣೆ ನಡೆಯಲಿದೆ. (ಎಸ್.ಎಚ್)