ಪ್ರಮುಖ ಸುದ್ದಿಮೈಸೂರು

ಕೇಂದ್ರ ಕಾರ್ಮಿಕ ವಿರೋಧಿ ನಿಲುವಿನ ವಿರುದ್ಧ ಸೆಟ್ಟೆದೆದ್ದ ಸಂಘಟನೆಗಳು : ಚುನಾವಣಾ ಜಾಗೃತಿ

ಕಾರ್ಮಿಕ ಸನ್ನದು ಕೈ ಪಿಡಿ ಬಿಡುಗಡೆ

ಮೈಸೂರು,ಮಾ.16 : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರು ಸೇರಿದಂತೆ ಹಲವಾರು ಅಸಂಘಟಿತ ಸಮುದಾಯವು ತೀವ್ರ ಸಂಕಷ್ಟವನ್ನು ಅನುಭವಿಸಿದ್ದು ಈ ನಿಟ್ಟಿನಲ್ಲಿ ಸರ್ಕಾರದ ತಪ್ಪು ನಿಲುವುಗಳ ಬಗ್ಗೆ ದುಡಿಯುವ ವರ್ಗದ ಜಾಗೃತಿಗಾಗಿ ‘ಕಾರ್ಮಿಕ ಸನ್ನದು ಎಂಬ ಕೈಪಿಡಿಯನ್ನು ಪ್ರಕಟಿಸಿ ವಿತರಿಸುವ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿವೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಕಾರ್ಮಿಕ ಸನ್ನದು ಎಂಬ ಕೈಪಿಡಿ ಬಿಡುಗಡೆಗೊಳಿಸಿ ನಂತರ, ಸಿಐಟಿಯು ಜಿಲ್ಲಾಧ್ಯಕ್ಷ ಬಾಲಾಜಿ ರಾವ್ ಮಾತನಾಡಿ, ಕೇಂದ್ರವು ತನ್ನ ತಪ್ಪು ನಿರ್ಧಾರಗಳಿಂದ ಕಾರ್ಮಿಕ ಹಾಗೂ ರೈತ ಸಮುದಾಯಗಳಿಗೆ ಸಂಕಷ್ಟ ಎದುರು ಮಾಡಿದೆ, ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕೆಂದು ಹಲವಾರು ಬಾರಿ ಮನವಿ, ಪ್ರತಿಭಟನೆ ಹಾಗೂ ಮುಷ್ಕರದ ಮೂಲಕ ತಿಳಿಸಿದ್ದೇವೆ, ಆದರೆ ಅವೆಲ್ಲವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿರುವ ಕಾರಣ ಈ ಬಾರಿಯ ಚುನಾವಣೆ ಹಿನ್ನೆಲೆಯಲ್ಲಿ ಸಂಕಷ್ಟ ಸಮುದಾಯಗಳಲ್ಲಿ ಅರಿವು ಮೂಡಿಸುವ ಕೆಲಸ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದರು.

ಪ್ರಕಟಿತ ಈ ಕಾರ್ಮಿಕ ಸನ್ನದು ಅನ್ನು ಕಾರ್ಮಿಕರಿಗೆ ವಿತರಿಸುವುದರೊಂದಿಗೆ ಎಲ್ಲ ಕೈಗಾರಿಕೆಗಳ ಬಳಿ ಗೇಟ್ ಸಭೆ, ಸಮಾವೇಶ, ಕೈಗಾರಿಕಾ ಪ್ರದೇಶ ಜಾಥಾ ಮೊದಲಾದವನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.

ಇದೇ ವೇಳೆ, ಸಾಕಷ್ಟು ಬಾರಿ ಮುಷ್ಕರ ನಡೆಸಿದರೂ ಕೇಂದ್ರ ಸರ್ಕಾರ ಕಾರ್ಮಿಕರು ಹಾಗೂ ರೈತರ ಯಾವುದೇ ಬೇಡಿಕೆ ಈಡೇರಿಸಿಲ್ಲ. ಈಗಲೂ ಕಾಯಂ ಮಾತಿ ಆರಂಭಗೊಂಡಿಲ್ಲ, ಕೇವಲ ಗುತ್ತಿಗೆ ಪದ್ಧತಿ ಇದೆ, ಅಪ್ರೆಂಟಿಸ್‌ಗಳಿಂದಲೇ ಕೆಲಸ ಮಾಡಿಸಲಾಗುತ್ತಿದೆ. ಉತ್ತರ ಭಾರತದ ತೋಟಗಾರಿಕೆ ಕಾರ್ಮಿಕರನ್ನು ಇಲ್ಲಿಗೆ ಕರೆತಂದು ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತ ಇಲ್ಲಿ ಕಾರ್ಮಿಕರ ಕುಟುಂಬಗಳನ್ನು ಬೀದಿಪಾಲು ಮಾಡಲಾಗುತ್ತಿದೆ.

ಹೀಗಾಗಿ ಈ ಬಾರಿಯ ಚುನಾವಣೆ ವೇಳೆ ಕಾರ್ಮಿಕ ವಿರೋಧಿ ಧೋರಣೆಯ ಪಕ್ಷಗಳಿಗೆ ಕಾರ್ಮಿಕರು, ರೈತರು ಮತ ಹಾಕದೇ ಕಾರ್ಮಿಕ ಪರ ವ್ಯಕ್ತಿಗಳಿಗೆ ಮತ ಹಾಕಬೇಕೆಂದು ಜಾಗೃತಿ ಮೂಡಿಸಲಾಗುವುದು.

ಚಂದ್ರಶೇಖರ ಕಟ್ಟಿ, ಯಶೋಧರಾ, ರಾಮಕೃಷ್ಣ, ಜಗನ್ನಾಥ್, ಜಯರಾಂ, ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: