ಮೈಸೂರು

ಸ್ನೇಹಿತರಿಂದಲೇ ಖಾಸಗಿ ಕಾಲೇಜು ವಿದ್ಯಾರ್ಥಿಯ ಕೊಲೆ

ಮೈಸೂರು, ಮಾ.16:- ಖಾಸಗಿ ಕಾಲೇಜು ವಿದ್ಯಾರ್ಥಿಯೋರ್ವನನ್ನು ಆತನ ನಾಲ್ವರು ಸ್ನೇಹಿತರೇ ಕೊಲೆಗೈದು ಸ್ಮಶಾನದಲ್ಲಿ ಹೂತಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೊಲೆಯಾದ ವಿದ್ಯಾರ್ಥಿಯನ್ನು ಕುಂಬಾರಕೊಪ್ಪಲಿನ ನಿವಾಸಿ ರಾಘವೇಂದ್ರ(24)ಎಂದು ಗುರುತಿಸಲಾಗಿದೆ. ಈತ ಮೊನ್ನೆ ಮನೆಯಿಂದ ಹೊರಹೋದವನು ಮನೆಗೆ ವಾಪಸ್ ಬಂದಿರಲಿಲ್ಲ. ಆತನ ನಾಲ್ವರು ಸ್ನೇಹಿತರು ಅವರೂ ಕೂಡ ಕುಂಬಾರಕೊಪ್ಪಲಿನ ನಿವಾಸಿಗಳೇ ಎನ್ನಲಾಗಿದ್ದು, ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ವಿಜಯನಗರ ಠಾಣೆ ಇನ್ಸಪೆಕ್ಟರ್ ಕುಮಾರ್  ಮತ್ತು ತಹಶೀಲ್ದಾರ್ ರು ಭೇಟಿ ನೀಡಿದ್ದು, ಹೂತಿಟ್ಟ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯುತ್ತಿದ್ದಾರೆ. ವಿಜಯನಗರ ಠಾಣೆ ಇನ್ಸಪೆಕ್ಟರ್ ಕುಮಾರ್  ಅವರು ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: