ಪ್ರಮುಖ ಸುದ್ದಿಮೈಸೂರು

ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂಸದ ಆರ್ ಧ್ರುವನಾರಾಯಣ್

ಮೈಸೂರು,ಮಾ.16:- ಚಾಮರಾಜನಗರದ ಹಾಲಿ ಸಂಸದ ಆರ್ ಧ್ರುವನಾರಾಯಣ್ ಅವರು  ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್  ಅವರನ್ನು ಮೈಸೂರಿನಲ್ಲಿಂದು ಭೇಟಿಯಾಗಿ ಮಾತುಕತೆ ನಡೆಸಿದರು.

ಸಾ.ರಾ.ಮಹೇಶ್ ಪಕ್ಷದ ಕಛೇರಿಯಲ್ಲಿ ಧ್ರುವನಾರಾಯಣ್ ಭೇಟಿ ನಡೆಸಿದ್ದು, ಲೋಕಸಭಾ ಚುನಾವಣಾ ಸಂಬಂಧಿಸಿ ಸಾ.ರಾ.ಮಹೇಶ್ ಅವರ ಸಹಾಯ‌ ಕೇಳಿದ್ದಾರೆ ಎನ್ನಲಾಗಿದೆ. 25 ರಂದು ಚಾಮರಾಜನಗರ ಲೋಕಸಭಾ ಚುನಾವಣೆಗೆ ಸಂಸದ  ಧ್ರುವನಾರಾಯಣ್ ನಾಮಪತ್ರ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಇರುವುದರಿಂದ ಈ ಬಾರಿ‌ ನನ್ನದೇ ಗೆಲುವು ಎಂದಿದ್ದಾರೆ ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ ಉಸ್ತುವಾರಿ ಸಚಿವರಾದ ಜಿ.ಟಿ.ದೇವೆಗೌಡರ ಸಹಾಯವನ್ನು ‌ಕೇಳುತ್ತೇನೆ ಎಂದಿರುವ ಅವರು ಮೈಸೂರು ಗ್ರಾಮಾಂತರ ಜೆ.ಡಿ.ಎಸ್.ಅಧ್ಯಕ್ಷ ನರಸಿಂಹ ಸ್ವಾಮಿಯವರನ್ನು ಭೇಟಿ ಮಾಡಲಿದ್ದಾರಂತೆ.  ಹಾಲಿ‌ ಸಂಸದರು ಹೆಚ್ಚಿನ ಮತದಿಂದ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದು, ಲೋಕಸಭಾ ಚುನಾವಣೆಯಲ್ಲಿ  ಚಾಮರಾಜನಗರ ಕ್ಷೇತ್ರ  ಕಾಂಗ್ರೆಸ್ ನ ಭದ್ರಕೋಟೆ ಎಂದು ಗುರುತಿಸಿಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: