ಮೈಸೂರು

ಕೂಲಿ ಕೇಳಿದ್ದಕ್ಕೆ ಕೊಲೆಗೈದ ದುಷ್ಕರ್ಮಿಗಳು

ಕೂಲಿ ಕೇಳಿದ್ದಕ್ಕೆ ಕಾರ್ಮಿಕನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದಾತನನ್ನು ಟಿ.ನರಸೀಪುರ ತಾಲೂಕು ವಾಟಾಳು ಗ್ರಾಮದ ನಿವಾಸಿ ನಿಂಗರಾಜು(32) ಎಂದು ಗುರುತಿಸಲಾಗಿದೆ.  ಅದೇ ಗ್ರಾಮದ ಅಭಿಷೇಕ್, ಚೇತನ್  ಹಾಗೂ ಇವರ ಸ್ನೇಹಿತರಾದ ನವಿಲೂರಿನ ದೊರೆಸ್ವಾಮಿ ಹಾಗೂ ಕಾಮನಹಳ್ಳಿಯ ಮಹೇಶ್ ಎಂಬುವರು ನಿಂಗರಾಜುವನ್ನು  ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಿಂಗಳ ಹಿಂದೆ ಕೊಲೆಯಾದ ಕಾರ್ಮಿಕ ನಿಂಗರಾಜು ಅಭಿಷೇಕ್ ಅವರ ಮನೆಗೆ ಕೆಲಸಕ್ಕೆ ತೆರಳಿದ್ದ. ಆದರೆ, ಕೂಲಿ ಹಣ ಕೇಳಿದ್ದಕ್ಕೆ ಜಗಳ ತೆಗೆದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು.. ಅಂದಿನಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿಂಗರಾಜು ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ. ಇದೀಗ ನಿಂಗರಾಜು ಪೋಷಕರು ಹಂತಕರ ಮನೆ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: