ದೇಶಪ್ರಮುಖ ಸುದ್ದಿ

ಮಾರ್ಚ್ 31ರ ಒಳಗೆ ಪ್ಯಾನ್‍ಗೆ ಆಧಾರ್ ಸಂಖ್ಯೆ ಜೋಡಿಸಿ

ನವದೆಹಲಿ (ಮಾ.16): ದೇಶದ ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಂದು ಶಾಕಿಂಗ್ ನೀಡಿದೆ. ತೆರಿಗೆ ಪಾವತಿಸುವ ಗ್ರಾಹಕರು, ಮಾರ್ಚ್ 31ರ ಒಳಗೆ ತಮ್ಮ ಪ್ಯಾನ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೇ ಮಾರ್ಚ್ 31ರ ಒಳಗೆ ಪ್ಯಾನ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸುವಂತೆ ಗಡುವು ನೀಡಿದೆ.

ಈ ಮೊದಲು, ದೇಶದ ವಿವಿಧ ಸಾರ್ವಜನಿಕ ವಲಯದ ಯೋಜನೆಗಳ ಉಪಯೋಗ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿತ್ತು. ಪಡಿತರ ಚೀಟಿ ಧಾನ್ಯ ಪಡೆಯಲು, ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಿತ್ತು. ಇದೀಗ ಇಂತಹ ಆಧಾರ್ ಸಂಖ್ಯೆಯನ್ನು ತೆರಿಗೆ ಪಾವತಿಸುವ ಗ್ರಾಹಕ ಪ್ಯಾನ್ ಕಾರ್ಡ್‍ಗೂ ಕಡ್ಡಾಯಗೊಳಿಸಿದೆ. ಹೀಗಾಗಿ ತೆರಿಗೆ ಇಲಾಖೆ ತೆರಿಗೆ ಪಾವತಿಸುವ ಗ್ರಾಹಕರ ಪ್ಯಾನ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸುವಂತೆ ಸೂಚಿಸಿದೆ. ಇದಕ್ಕಾಗಿ ಮಾರ್ಚ್ 31ರ ಗಡುವನ್ನು ನೀಡಿದೆ. (ಎನ್.ಬಿ)

Leave a Reply

comments

Related Articles

error: