ದೇಶಪ್ರಮುಖ ಸುದ್ದಿ

ಮ್ಯಾನ್ಮಾರ್ ಗಡಿಯಲ್ಲೂ ಉಗ್ರರ ವಿರುದ್ಧ ಸೇನೆಯಿಂದ ಯಶಸ್ವಿ ಕಾರ್ಯಚರಣೆ

ನವದೆಹಲಿ (ಮಾ.16): ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಷ್ ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದ ಬಳಿಕ ಇದೀಗ ಚೀನಾದ ಉಗ್ರ ಸಂಘಟನೆ ವಿರುದ್ಧ ಕಾರ್ಯಾಚರಣೆ ನಡೆಸಿದೆ.

ಮಯನ್ಮಾರ್ ಗಡಿಯಲ್ಲಿ ಭಾರತ ನಿರ್ಮಿಸುತ್ತಿರುವ ಬಹು ಉದ್ದೇಶಿತ ಕಲಾಡನ್ ಯೋಜನೆಗೆ ಅಡ್ಡಿ ಪಡಿಸಲೆಂದೇ ಈ ಕೆಐಎ ಉಗ್ರ ಸಂಘಟನೆ ಅರಾಕನ್ ಆರ್ಮಿಗೆ ಬೆಂಬಲವಾಗಿ ನಿಂತಿತ್ತು ಎನ್ನಲಾಗಿದೆ. ಸೇನೆಯ ಮೂಲ ಟಾರ್ಗೆಟ್ ಅರಾಕನ್ ಆರ್ಮಿಯಾಗಿದ್ದು, ಈ ಉಗ್ರ ಸಂಘಟನೆಗೆ ಚೀನಾ ಮೂಲದ ಕಚಿನ್ ಇಂಡಿಪೆಂಡೆಂಟ್ ಆರ್ಮಿ (ಕೆಐಎ) ನೇರ ಬೆಂಬಲ ನೀಡಿತ್ತು. ಈ ಕೆಐಎ ಉಗ್ರ ಸಂಘಟನೆಗೆ ಚೀನಾ ಸೇನೆಯ ಬೆಂಬಲ ಕೂಡ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬೃಹತ್ ಕಾರ್ಯಾಚರಣೆಗಾಗಿ ಭಾರತೀಯ ಸೇನೆ ತನ್ನ ಬೃಹತ್ ಸೇನಾ ತುಕಡಿಗಳನ್ನು, ವಿಶೇಷ ದಳಗಳನ್ನು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದೀಗ ಭಾರತೀಯ ಸೇನೆ ಮಯನ್ಮಾರ್ ಸೇನೆಯೊಂದಿಗೆ ಕೈಜೋಡಿಸಿ ಅರಾಕನ್ ಆರ್ಮಿ ಉಗ್ರ ಸಂಘಟನೆಯ 12ಕ್ಕೂ ಹೆಚ್ಚು ಕ್ಯಾಂಪ್ ಗಳನ್ನು ಧ್ವಂಸ ಮಾಡಿದೆ. ಮಿಜೋರಾಂ, ನಾಗಾಲ್ಯಾಂಡ್ ನಿಂದ ಅರುಣಾಚಲ ಪ್ರದೇಶ ಗಡಿಯವರೆಗೂ ಹಬ್ಬಿದ್ದ 12ಕ್ಕೂ ಹೆಚ್ಚು ಉಗ್ರ ಕ್ಯಾಂಪ್ ಗಳನ್ನು ಇದೀಗ ಸೇನೆ ಧ್ವಂಸ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. (ಎನ್.ಬಿ)

Leave a Reply

comments

Related Articles

error: