ಸುದ್ದಿ ಸಂಕ್ಷಿಪ್ತ

ಮಾರ್ಚ್ 18 ರಂದು ಯುವ ಸೌರಭ, ಮತದಾನ ಅರಿವು ಕಾರ್ಯಕ್ರಮ

ಮಂಡ್ಯ (ಮಾ.16): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಯುವ ಸೌರಭ ಹಾಗೂ ಮತದಾನ ಅರಿವು ಕಾರ್ಯಕ್ರಮವನ್ನು ಮಾರ್ಚ್ 18 ರಂದು ಮಧ್ಯಾಹ್ನ 3 ಗಂಟೆಗೆ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಜಿಲ್ಲಾಧಿಕಾರಿಯಾದ ಎನ್.ಮಂಜುಶ್ರೀ ಉದ್ಘಾಟನೆ ಮಾಡುವವರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಕೆ. ಯಾಲಕ್ಕಿ ಗೌಡ ಅಧ್ಯಕ್ಷತೆ ವಹಿಸುವರು. ಆರಕ್ಷಕರ ಅಧೀಕ್ಷಕರಾದ ಶಿವಪ್ರಕಾಶ್ ದೇವರಾಜು ಕಲಾ ತಂಡಗಳಿಗೆ ಚಾಲನೆ ನೀಡುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಟಿ.ವಿ. ನಂದೀಶ್ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: