ಕರ್ನಾಟಕ

ಪದವಿ ಪೂರ್ಣಗೊಳಿಸದ ಹಳೆಯ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ

ಮಂಡ್ಯ (ಮಾ.16): ಸರ್ಕಾರಿ ಮಹಾವಿದ್ಯಾಲಯ ಕಾಲೇಜು ಮಂಡ್ಯ ಇಲ್ಲಿ ಪದವಿ ಪರೀಕ್ಷೆಗಳಲ್ಲಿ ಅನುತೀರ್ಣರಾಗಿ ಪದವಿ ಪಡೆಯಲು ಅವಧಿ ಮುಗಿದು ಅನರ್ಹಗೊಳಿಸಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಲು ಮತ್ತೊಂದು ಹೆಚ್ಚುವರಿ ಅವಕಾಶವನ್ನು ಕಲ್ಪಿಸಲಾಗಿದೆ.

ಪರೀಕ್ಷೆ ತೆಗೆದುಕೊಳ್ಳಬಯಸುವ 2012-13 ನೇ ಶೈಕ್ಷಣಿಕ ವರ್ಷವೂ ಸೇರಿದಂತೆ ಎಲ್ಲಾ ಹಿಂದಿನ ವರ್ಷಗಳಲ್ಲಿ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳು 2018-19ನೇ ಸಾಲಿನಲ್ಲಿ ಏಪ್ರಿಲ್/ಮೇ 2019 ಪರೀಕ್ಷೆಗಳಲ್ಲಿ 2/4/6ನೇ ಸೆಮಿಸ್ಟರ್’ಗಳ ಪರೀಕ್ಷೆಗಳನ್ನು ಬರೆಯಬಹುದಾಗಿದೆ.

ಈ ಪರೀಕ್ಷೆಗಳನ್ನು ಬರೆಯಲು ಅಭ್ಯರ್ಥಿಗಳು 2 ನೇ ಸೆಮಿಸ್ಟರ್‍ನ ಪತ್ರಿಕೆಗಳಿಗೆ 2014-15ರ ಪಠ್ಯಕ್ರಮ, 4 ನೇ ಸೆಮಿಸ್ಟರ್ ಪತ್ರಿಕೆಗಳಿಗೆ 2015-16ರ ಪಠ್ಯಕ್ರಮ ಮತ್ತು 6 ನೇ ಸಡಮಿಸ್ಟರ್ ಪತ್ರಿಕೆಗಳಿಗೆ 2016-17ರ ಪಠ್ಯಕ್ರಮವನ್ನು ಕಾಲೇಜಿನ ಸಂಬಂಧಪಟ್ಟ ವಿಭಾಗಗಳಿಂದ ಪಡೆದು ಅಧ್ಯಯನ ಮಾಡುವುದು.

ಎಲ್ಲ ವಿದ್ಯಾರ್ಥಿಗಳು ದಿನಾಂಕ 14 ರಿಂದ 21 ರವರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು. ರೂ.300/- ದಂಡ ಶುಲ್ಕದೊಂದಿಗೆ ಮಾರ್ಚ್ 23 ರವರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಕಾಲೇಜಿನ ಸೂಚನಾ ಫಲಕ ನೋಡಬಹುದು ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: