ಮೈಸೂರು

ಸಮಾನ ಶಿಕ್ಷಣ ನೀಡಲು ಒತ್ತಾಯಿಸಿ ಪ್ರತಿಭಟನೆ

ದಲಿತರಿಗೂ ಸಮಾನ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿ ಮೈಸೂರು ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಜ್ಯೋತಿ ಬಾಪುಲೆ  ಮತ್ತು ಸಾವತ್ರಿಬಾಯಿ ಪುಲೆ ಅವರು ದಲಿತರ ಅಭಿವೃದ್ಧಿಗಾಗಿ ಸದಾ ಶ್ರಮಿಸಿದ್ದರು. ಸರ್ಕಾರ ಸಾವಿತ್ರಿಭಾಯಿ ಪುಲೆಯವರ ಜಯಂತಿ ಅಂಗವಾಗಿ ಸಮಾನ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚದೇ ಮುಂದುವರಿಸಬೇಕು. ಮಾತೃಭಾಷೆ ಕನ್ನಡದ ಜೊತೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಹೆಚ್.ಕೆ.ದಿವಾಕರ್, ಪುಟ್ಟಲಕ್ಷ್ಮಮ್ಮ, ಶಿವಮ್ಮ, ಭಾಗ್ಯಲಕ್ಷ್ಮಿ, ಗೀತಾ, ಮಹದೇವಮ್ಮ, ಚಾಮರಾಜು ಮಲ್ಲೇಶ್ ಸೇರಿದಂತೆ ಐವತ್ತಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: