ಕರ್ನಾಟಕಪ್ರಮುಖ ಸುದ್ದಿ

‘ಕೈ’ ತಪ್ಪಿದ ತುಮಕೂರು ಕ್ಷೇತ್ರ ಟಿಕೆಟ್: ಶಾಸಕ ಸುಧಾಕರ್ ಅಸಮಧಾನದ ಟ್ವೀಟ್!

ಬೆಂಗಳೂರು (ಮಾ.16): ರಾಜ್ಯದ ಮೈತ್ರಿ ಪಕ್ಷದಲ್ಲಿ ಲೋಕಸಭಾ ಚುಣಾವಣೆಯ ಟಿಕೆಟ್ ಗೊಂದಲ ಇನ್ನೂ ಬಗೆಹರಿದಿಲ್ಲ. ಈಗಾಗಲೇ ಟಿಕೆಟ್ ಕೈ ತಪ್ಪಿರುವುದರಿಂದ ಹಲವು ನಾಯಕರು ಗರಂ ಆಗಿದ್ದು ಈಗ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕೂಡಾ ಬೇಸರ ವ್ಯಕ್ತಡಿಸಿದ್ದಾರೆ.

ತುಮಕೂರು ಸಂಸದ ಮುದ್ದೆಹನುಮೇಗೌಡರಿಗೆ ಟಿಕೆಟ್ ದಕ್ಕದೇ ಇರುವುದು ಸುಧಾಕರ್ ಬೇಸರಕ್ಕೆ ಕಾರಣ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುವುದರಿಂದ ಸೀಟು ಹಂಚಿಕೆ ವೇಳೆ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿತ್ತು.

ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮುದ್ದೆಹನುಮೇಗೌಡ ಸಂಸದರಾಗಿರುವುದರಿಂದ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೇರಿ ಹಲವರು ಅಸಮಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯ ಬಗ್ಗೆ ಶಾಸಕ ಡಾ ಸುಧಾಕರ್, ಮತ್ತೊಬ್ಬ ಒಕ್ಕಲಿಗ ನಾಯಕನಿಗೆ ಅನ್ಯಾಯವಾಗಿದೆ. ನನ್ನ ನೈತಿಕ ಬೆಂಬಲ ನಿಮಗಿದೆ ಗೌಡರೇ ಎಂದು ಟ್ವೀಟ್ ಮಾಡಿದ್ದಾರೆ.

Yet another injustice mooted to decent & sober Vokkaliga leader. My moral support with you gowda ji. pic.twitter.com/sBvY0q5CAb
Dr Sudhakar K (@mla_sudhakar) March 15, 2019

(ಎನ್.ಬಿ)

Leave a Reply

comments

Related Articles

error: