ದೇಶಪ್ರಮುಖ ಸುದ್ದಿ

ಪ್ರಧಾನಿ ಜೀವನಾಧರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರ ಸದ್ಯ ತೆರೆಗೆ ಬರೋದು ಅನುಮಾನ

ಮುಂಬೈ (ಮಾ.16): ಚುನಾವಣೆ ಬಿಸಿಯ ನಡುವೆಯೇ ನಟ ವಿವೇಕ ಒಬೇರಾಯ್‌ ಪ್ರಧಾನ ಪಾತ್ರದಲ್ಲಿರುವ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ದೇಶಾದ್ಯಂತ ಏ.12ರಂದು ತೆರೆಕಾಣಲಿದೆ.

ಕ್ರೀಡಾಪಟುಗಳಾದ ಮೇರಿ ಕೋಮ್‌ ಮತ್ತು ಸರಬ್ಜಿತ್‌ ಸಿಂಗ್‌ ಅವರ ಜೀವನಾಧಾರಿತ ಚಿತ್ರ ನಿರ್ದೇಶಿಸಿದ್ದ ಒಮಂಗ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ಜನವರಿಯಿಂದ ಗುಜರಾತ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಮುಂಬೈನಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ.

ಮೋದಿ ಜೀವನದಲ್ಲಿನ ಹಲವು ಕ್ಷೇತ್ರಗಳೂ ಚಿತ್ರೀಕರಣಗೊಂಡಿವೆ. ಮೋದಿ ಗುಜರಾತ್‌ ಸಿಎಂ ಆದಾಗಿನ ಸಾಧನೆಗಳು, 2014ರಲ್ಲಿ ಪ್ರಧಾನಿ ಆಗಿ ನೇಮಕಗೊಳ್ಳುವವರೆಗಿನ ಹಲವು ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಸಂದೀಪ್‌ ಸಿಂಗ್‌ ನಿರ್ಮಾಪಕರಾಗಿದ್ದು, ಇದರ ಪೋಸ್ಟರ್‌ 27 ಭಾಷೆಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಚುನಾವಣಾ ಸಂಹಿತೆ ಜಾರಿಯ ಸಂದರ್ಭದಲ್ಲೇ ಮೋದಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿರುವುದು ಸಂಹಿತೆಯ ಅಡಿ ಬರುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. (ಎನ್.ಬಿ)

Leave a Reply

comments

Related Articles

error: